ಕರ್ನಾಟಕ

karnataka

ETV Bharat / sitara

ಸೆನ್ಷೆಷನ್ ಸೃಷ್ಟಿಸಿದ್ದ ಟ್ವೀಟ್ ಬಗ್ಗೆ​ ಸುದೀಪ್​ ಕೊನೆಗೂ ನೀಡಿದ್ರು ಸ್ಪಷ್ಟನೆ!

ಕಿಚ್ಚನ ಒಂದು ಟ್ವೀಟ್ ಸಖತ್ ಸದ್ದು ಮಾಡಿತ್ತು. ಸುದೀಪ್ ಈ ಮಾತುಗಳನ್ನು ಯಾರಿಗೆ ಹೇಳಿದ್ರು? ಯಾರಿಗೆ ಟಾಂಗ್ ಕೊಟ್ರು ಎಂಬಿತ್ಯಾದಿ ಪ್ರಶ್ನೆಗಳು ಹರಿದಾಡುತ್ತಿದ್ದವು.

actor sudeep

By

Published : Aug 15, 2019, 1:25 PM IST

ಇತ್ತೀಚಿಗೆ ಕಿಚ್ಚ ಸುದೀಪ್ ಮಾಡಿರುವ ಟ್ವೀಟ್​​ವೊಂದು ಭಾರಿ ಸಂಚಲನ ಮೂಡಿಸಿತ್ತು. ಕಿಚ್ಚನ ಪೋಸ್ಟ್ ನಾನಾ ಬಗೆಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಈ ಟ್ವೀಟ್​ ಬಗ್ಗೆ ಸದ್ಯ ಕರುನಾಡಿನ ಮಾಣಿಕ್ಯ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಟ್ವೀಟ್ ಬಗ್ಗೆ​ ಸುದೀಪ್​ ಸ್ಪಷ್ಟನೆ

ಇಂದು 73 ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಧ್ವಜಾರೋಹಣದ ಬಳಿಕ ಮಾತಾಡಿರುವ ಅವರು, ನನ್ನ ಟ್ವೀಟ್ ಇಷ್ಟೊಂದು ಚರ್ಚೆ ಆಗ್ತಿದೆ ಅಂದ್ಮೇಲೆ, ನಾನು ದೊಡ್ಡ ಮಟ್ಟದಲ್ಲಿ ಬೆಳೆದಿದೀನಿ ಎಂದರ್ಥ. ನಾನು ಇಂದು ಇಲ್ಲಿ ಕುಳಿತುಕೊಳ್ಳೊಕೆ 23 ವರ್ಷ ಬೇಕಾಯ್ತು ಅಂತಾ ಮತ್ತೊಂದೆಡೆ ಎನ್ನಿಸುತ್ತಿದೆ. ನನ್ನ ಟ್ವೀಟ್​ ಈ ಪರಿ ಓಡುತ್ತೆ ಅಂದ್ರೆ, ನೀವೆಲ್ಲ ಪ್ರೀತಿಯಿಂದ ಓದಿದ್ದೀರಿ ಎಂದರ್ಥ. ಅದರಲ್ಲಿ ಒಂದು ಒಳ್ಳೆಯ ಸಂದೇಶ ಇತ್ತು ಎನ್ನುವ ಮಾಧ್ಯಮದವರ ಪ್ರಶ್ನೆಗೆ ರಿಯಾಕ್ಟ್ ಮಾಡಿದ ಸುದೀಪ್​, ನಾನು ಯಾವುದಕ್ಕೂ ಕೆಟ್ಟ ಸಂದೇಶ ಕೊಡುವುದಿಲ್ಲ ಎಂದರು.

ಕಿಚ್ಚನ ಟ್ವೀಟ್​ಲ್ಲಿ ಏನಿತ್ತು?

ಸುದೀಪ್​ ಅವರ ಫೋಟೋ ಇರುವ ಚಿತ್ರದಲ್ಲಿ ,'ಏನನ್ನೋ ಸಾಬೀತು ಮಾಡುವುದಕ್ಕೋಸ್ಕರ ನಾನು ಯಾರೊಬ್ಬರ ಜತೆಗೆ ಹೋರಾಟಕ್ಕೆ ಇಳಿಯುವುದಿಲ್ಲ. ನನ್ನ ಎದುರಾಳಿಗೆ ನನ್ನೊಂದಿಗೆ ಫೈಟ್​ ಮಾಡಲು ಯೋಗ್ಯತೆ ಇರಬೇಕು. ಅಂದಾಗ ಮಾತ್ರ ನಾನೂ ಫೈಟ್​ ಮಾಡುತ್ತೇನೆ' ಎಂದು ಬರೆಯಲಾಗಿತ್ತು. ಇದನ್ನು ಟ್ವಿಟ್ಟರ್​ಲ್ಲಿ ಪೋಸ್ಟ್ ಮಾಡಿದ್ದ ಸುದೀಪ್​, 'ಒಬ್ಬ ಪುರುಷ ತಾನು ಗಂಡಸು ಎಂದು ಪ್ರೂವ್​ ಮಾಡಲು ಮದ್ಯಪಾನ ಮಾಡಬೇಕಿಲ್ಲ, ಹಾಗೇ ಕತ್ತಲಾಗಲಿ ಎಂದು ಕಾಯುವುದೂ ಇಲ್ಲ.’ ಇದು ನಾನು ಎಲ್ಲೋ ಓದಿದ ಸುಂದರ ಸಾಲುಗಳು. ತುಂಬ ಅದ್ಭುತವಾದ ಅರ್ಥ ಕೊಡುತ್ತದೆ ಎಂದು ಬರೆದುಕೊಂಡಿದ್ದರು.

ABOUT THE AUTHOR

...view details