ಕನ್ನಡ ಚಿತ್ರರಂಗದಲ್ಲಿ ಜುಲೈ 12ನೇ ತಾರೀಖು ಬಂತು ಅಂದ್ರೆ ಸೆಂಚುರಿ ಸ್ಟಾರ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಯಾಕೆಂದರೆ, ಕನ್ನಡ ಚಿತ್ರರಂಗದ ಚಿರ ಯುವಕ, ಗಾಜನೂರು ಗಂಡು ಶಿವರಾಜ್ ಕುಮಾರ್ ಅವ್ರ ಹುಟ್ಟು ಹಬ್ಬ.
ಈ ಹಿನ್ನೆಲೆ ಜುಲೈ 12ರಂದು ನಾಗವಾರದ ಶಿವಣ್ಣನ ನಿವಾಸದ ಮುಂದೆ ಅಭಿಮಾನಿಗಳು ಜಾತ್ರೆ ರೀತಿ ಸೇರುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಕಾರಣ, ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿಲ್ಲ ಅಂತಾ ಈಗಾಗಲೇ ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಅವರು ಹೇಳಿದ್ದಾರೆ.