ಕರ್ನಾಟಕ

karnataka

ETV Bharat / sitara

ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಆಹಾರ ವಿತರಿಸಿದ ನಟ ಶ್ರೀಮುರಳಿ - ನಟ ಶ್ರೀಮುರಳಿ,

ಕೊರೊನಾ ಎರಡನೇ ಅಲೆಯಿಂದ ತತ್ತಿರುಸಿರುವ ದೇಶದ ಜನರಿಗೆ ಸಹಾಯ ಮಾಡುವುದಕ್ಕೆ ಹಲವು ನಟ-ನಟಿಯರು ತಮ್ಮದೇ ರೀತಿಯಲ್ಲಿ ಹೆಗಲು ಕೊಟ್ಟಿದ್ದಾರೆ.

Actor Srimurali Food distribution, Actor Srimurali Food distribution to Government Hospital staff, Actor Srimurali, Actor Srimurali news, ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಶ್ರೀಮುರಳಿ ಆಹಾರ ವಿತರಣೆ, ಬೆಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಶ್ರೀಮುರಳಿ ಆಹಾರ ವಿತರಣೆ, ನಟ ಶ್ರೀಮುರಳಿ, ನಟ ಶ್ರೀಮುರಳಿ ಸುದ್ದಿ,
ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಶ್ರೀಮುರಳಿ ಆಹಾರ ವಿತರಣೆ

By

Published : May 10, 2021, 9:27 AM IST

ಸುದೀಪ್ ಅವರು ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್​ನಿಂದ ಅಗತ್ಯವಿರುವವರಿಗೆ 300 ಆಕ್ಸಿಜನ್ ಸಿಲಿಂಡರ್‌ಗಳನ್ನು ಕೊಟ್ಟಿದ್ದಾರೆ. ಇನ್ನು, ಶ್ರದ್ಧಾ ಶ್ರೀನಾಥ್, ಸಂಯುಕ್ತಾ ಹೊರನಾಡು, ಭುವನ್ ಪೊನ್ನಣ್ಣ, ರಾಗಿಣಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರು ತಮ್ಮದೇ ರೀತಿಯಲ್ಲಿ ಕರೊನಾದಿಂದ ತತ್ತರಿಸಿದವರಿಗೆ ಸಹಾಯ ಮಾಡುತ್ತಲೇ ಇದ್ದಾರೆ. ಈ ಸಾಲಿಗೆ ನಟ ಶ್ರೀಮುರಳಿ ಸಹ ಸೇರಿದ್ದಾರೆ.

ಓದಿ:ಸುದೀಪ್‌ಗೆ ಏನಾಗಿತ್ತು? ಕೊನೆಗೂ ಉತ್ತರಿಸಿದ ಕಿಚ್ಚ!

ಕೊರೊನಾ ಎರಡನೇ ಅಲೆಯಿಂದ ಸಂಕಷ್ಟದಲ್ಲಿರುವ ರೋಗಿಗಳ ಜೀವ ಉಳಿಸುವುದಕ್ಕೆ ಹರಸಾಹಸ ಪಡುತ್ತಿರುವ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ನಟ ಶ್ರೀಮುರಳಿ ಊಟ ವಿತರಿಸಿದ್ದಾರೆ.

ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರದ ಜನರಲ್ ಆಸ್ಪತ್ರೆ, ರಾಜಾಜಿನಗರದ ಇಎಸ್‌ಐ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ ಹಾಗೂ ಸಿವಿ ರಾಮನ್ ಆಸ್ಪತ್ರೆಯ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗೆ ಭಾನುವಾರ ಊಟದ ವ್ಯವಸ್ಥೆ ಮಾಡಿದ್ದಾರೆ.

ಓದಿ:ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದ ಪೊಲೀಸರು: 10 ಗಂಟೆ ಬಳಿಕ ರಸ್ತೆಗಿಳಿದರೆ ಲಾಠಿ ರುಚಿ ಗ್ಯಾರಂಟಿ

ಸುತ್ತಮುತ್ತ ಸಂಸ್ಥೆಯ ಸಮುದ್ಯತಾ ಶಿವರಾಮ್ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದರು. ಹೀಗಾಗಿ ಅವರಿಗೆ ತಮ್ಮದೇ ರೀತಿಯಲ್ಲಿ ಏನಾದರೂ ನೆರವು ನೀಡಬೇಕು ಎಂದು ತೀರ್ಮಾನಿಸಿದ ಶ್ರೀಮುರಳಿ ಐದು ಆಸ್ಪತ್ರೆಗಳ ಸಿಬ್ಬಂದಿಗೆ ಊಟ ವಿತರಿಸಿದ್ದಾರೆ.

ABOUT THE AUTHOR

...view details