ಕರ್ನಾಟಕ

karnataka

ETV Bharat / sitara

ರೋರಿಂಗ್​ ಸ್ಟಾರ್ ಹುಟ್ಟುಹಬ್ಬ ಆಚರಣೆ ಇಲ್ಲ : ಫ್ಯಾನ್ಸ್​​ಗೆ ಶ್ರೀಮುರಳಿ ಸಂದೇಶ - ರೋರಿಂಗ್​ ಸ್ಟಾರ್​ ಶ್ರೀಮುರಳಿ

ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗೂ ಆಶೀರ್ವಾದವನ್ನು ಬಯಸುವ ನಿಮ್ಮ ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ) ಎಂದು ಪೋಸ್ಟ್​ ಮಾಡಿದ್ದಾರೆ..

actor-sriimurali
ರೋರಿಂಗ್​ ಸ್ಟಾರ್ ಹುಟ್ಟುಹಬ್ಬ ಆಚರಣೆ

By

Published : Dec 17, 2021, 7:52 AM IST

ರೋರಿಂಗ್​ ಸ್ಟಾರ್​ ಶ್ರೀಮುರಳಿಗೆ ಇಂದು 39ನೇ ಜನ್ಮದಿನದ ಸಂಭ್ರಮ. ಅದ್ಧೂರಿಯಾಗಿ 'ಮದಗಜ'ನ ಹುಟ್ಟು ಹಬ್ಬ ಆಚರಿಸಬೇಕು ಎಂದು ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ಯಾಕಂದ್ರೆ, ಸ್ವತಃ ಶ್ರೀಮುರುಳಿಯವರು ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿರುವ 'ಅಗಸ್ತ್ಯ', 'ನನ್ನ ಪ್ರೀತಿಯ ಅಭಿಮಾನಿಗಳೇ, ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಾಗುವುದಿಲ್ಲ.

ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ. ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗೂ ಆಶೀರ್ವಾದವನ್ನು ಬಯಸುವ ನಿಮ್ಮ ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ) ಎಂದು ಪೋಸ್ಟ್​ ಮಾಡಿದ್ದಾರೆ.

ಶ್ರೀಮುರಳಿ ಹುಟ್ಟು ಹಬ್ಬ :ಶ್ರೀಮುರಳಿಯವರು ಹೇಳಿರುವ ಕಾರಣ ಎಲ್ಲರಿಗೂ ಗೊತ್ತೇ ಇದೆ. ಪವರ್​ ಸ್ಟಾರ್​ ಪುನೀತ್ ರಾಜ್‌ಕುಮಾರ್​ ಅವರ ಅಕಾಲಿಕ ಮರಣ ಅವರಿಗೆ ಬಹಳ ನೋವುಂಟು ಮಾಡಿದೆ. ಅಪ್ಪು ಮತ್ತು ಶ್ರೀಮುರಳಿಗೆ ನೆಚ್ಚಿನ ಸಂಬಂಧಿ. ಅವರಿಬ್ಬರ ಒಡನಾಟವು ಬಹಳ ಚೆನ್ನಾಗಿತ್ತು. ಹೀಗಿರುವಾಗ ಯುವರತ್ನ ಅಗಲಿಕೆಯಿಂದ 'ರಥಾವರ'ನಿಗೆ ಹೊರಬರಲು ಆಗುತ್ತಿಲ್ಲ. ಈ ಹಿನ್ನೆಲೆ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ.

ಅಪ್ಪು ಮಾಮಾ.. ಎಂದು ಸದಾ ಕರೆಯುತ್ತಿದ್ದ ಶ್ರೀಮುರುಳಿ ಪುನೀತ್‌ ಅವರ ಜೊತೆ ಸಿನಿಮಾ ಮಾಡ್ಬೇಕು ಎನ್ನುವ ಮಹದಾಸೆ ಇತ್ತು. ಆದ್ರೆ, ವಿಧಿಯ ಮುಂದೆ ಎಲ್ಲವೂ ಶೂನ್ಯವಾಯಿತು. ಇತ್ತೀಚೆಗಷ್ಟೇ ಮದಗಜ ಸಿನಿಮಾ ಕುರಿತು ಪುನೀತ್​​ ರಾಜಕುಮಾರ್ ಅವರು ಹಾಡಿ ಹೊಗಳಿದ್ದರು. ಆದ್ರೆ, ಚಿತ್ರ ಬಿಡುಗಡೆಯಾದ್ರೂ ನೋಡಲು ಅವರಿಲ್ಲ ಎನ್ನುವ ನೋವು ಹೆಚ್ಚಿದೆ.

ABOUT THE AUTHOR

...view details