ಕೇಂದ್ರ ಸರ್ಕಾರ ರಸ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇದರಿಂದ ಸಾಮಾನ್ಯ ಜನತೆ ಕಕ್ಕಾಬಿಕ್ಕಿ ಆಗಿದ್ದಾರೆ. ಸದ್ಯ ಈ ವಿಚಾರದ ಕುರಿತು ಕನ್ನಡ ನಟಿ ಸೋನು ಗೌಡ ಧ್ವನಿ ಎತ್ತಿದ್ದು, ದುಬಾರಿ ಫೈನ್ ಹಾಕುತ್ತಿರುವುದಕ್ಕೆ ಕಿಡಿಕಾರಿದ್ದಾರೆ.
ಹೊಸ ಟ್ರಾಫಿಕ್ ರೂಲ್ಸ್ ವಿರುದ್ದ ಗುಡುಗಿದ ನಟಿ ಸೋನು ಗೌಡ - ಟ್ರಾಫಿಕ್ ದಂಡ
ರಸ್ತೆ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಟ್ಟುನಿಟ್ಟಿನ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ದುಬಾರಿ ದಂಡ ತೆರಬೇಕಾದ ಈ ರೂಲ್ಸ್ ವಿರುದ್ಧ ಈಗಾಗಲೇ ಜನರು ಅಪಸ್ವರ ಎತ್ತಿದ್ದಾರೆ. ಕನ್ನಡದ ನಟಿ ಸೋನು ಗೌಡ ಅವರಿಗೂ ಇದು ಬಿಲ್‌ಕುಲ್ ಇಷ್ಟ ಆಗಿಲ್ಲ.
ನಟಿ ಸೋನು ಗೌಡ
ಈ ಬಗ್ಗೆ ಟ್ವೀಟ್ ಮಾಡಿರುವ ಸೋನು ಗೌಡ, ಮೊದಲು ಜನ ಸಾಮಾನ್ಯರು ಓಡಾಡುವ ರಸ್ತೆಗಳನ್ನು ಸರಿ ಮಾಡಿ. ಆಮೇಲೆ ಫೈನ್ ಕೇಳಿ ಎಂದು ಗುಡುಗಿದ್ದಾರೆ.
ಹೊಸ ಟ್ರಾಫಿಕ್ ನಿಯಮದಿಂದ ಭಾರಿ ದಂಡ ಕುರಿತು ಪರ ಹಾಗೂ ವಿರೋಧಾಭಿಪ್ರಾಯಗಳು ಜೋರಾಗಿ ಕೇಳಿ ಬರುತ್ತಿದೆ.