ಕನ್ನಡ ಚಿತ್ರಗಳನ್ನು ನೋಡಿದರೆ ಕನ್ನಡ ಬೆಳೆಯಲ್ಲ. ಚಿತ್ರರಂಗದ ನಟ-ನಟಿಯರು ಕನ್ನಡಪರ ಹೋರಾಟಕ್ಕೆ ಬೆಂಬಲ ನೀಡಿ ರಚನಾತ್ಮಕವಾಗಿ ಹೋರಾಟಕ್ಕೆ ಇಳಿದರೆ ಕನ್ನಡ ಬೆಳೆಯಲಿದೆ ಎಂದು ನಟ, ಹೋರಾಟಗಾರ ಚೇತನ್ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
'ಹಿಂದಿ ದಿವಸ್' ವಿರೋಧಿಸುವ ನಟ ಚೇತನ್ ಹೇಳೋದು ಹೀಗೆ - Chetan outrage against Hindi Diwash
ಹಿಂದಿ ದಿವಸ್ ಆಚರಣೆ ವಿರೋಧಿಸಿ 'ಹಿಂದಿ ಗೊತ್ತಿಲ್ಲ ಹೋಗೊ ನಾವು ಕನ್ನಡಿಗರು, ನಾವು ದ್ರಾವಿಡರು' ಎಂಬ ಬರಹವುಳ್ಳ ಟೀ ಶರ್ಟ್ಗಳನ್ನು ನಟ ಚೇತನ್ ಬಿಡುಗಡೆ ಮಾಡಿದರು.
ಹಿಂದಿ ದಿವಸ್ ಆಚರಣೆ ವಿರೋಧಿಸಿ 'ಹಿಂದಿ ಗೊತ್ತಿಲ್ಲ ಹೋಗೊ ನಾವು ಕನ್ನಡಿಗರು, ನಾವು ದ್ರಾವಿಡರು' ಎಂಬ ಬರಹವುಳ್ಳ ಟೀ ಶರ್ಟ್ ಲಾಂಚ್ ಮಾಡಿ ಮಾತನಾಡಿದ ನಟ ಚೇತನ್, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ರು. ಕೇಂದ್ರ ಸರ್ಕಾರ ಅಕ್ಟೋಬರ್ 14 ಆಚರಿಸುವ "ಹಿಂದಿ ದಿವಸ್ " ಅನ್ನು ವಿರೋಧಿಸಿದ ನಟ , ನಮಗೆ ಕನ್ನಡ ಸಾಕು ವ್ಯವಹಾರಕ್ಕೆ ಇಂಗ್ಲಿಷ್ ಬೇಕು. ಹಿಂದಿ ನಮಗೆ ಬೇಡ. 73 ವರ್ಷಗಳಿಂದಲೂ ಹಿಂದಿ ಹೇರಿಕೆಯ ದಬ್ಬಾಳಿಕೆ ನಮ್ಮ ಮೇಲೆ ಆಗುತ್ತಿದೆ ಎಂದರು.
ನಾವು ದಕ್ಷಿಣ ಭಾರತೀಯರು, ದ್ರಾವಿಡರು. ಇದನ್ನು ಸಹಿಸಲು ಅವರಿಗೆ ಸಾಧ್ಯವಿಲ್ಲ. ಕನ್ನಡ ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಉನ್ನತ ಹುದ್ದೆಗಳು ಸಿಗುವ ಹಾಗೆ ಸರ್ಕಾರ ಮಾಡಬೇಕು. ಕನ್ನಡಕ್ಕೆ ಬೆಲೆ ನೀಡದ ಕಾರ್ಪೊರೇಟ್ ಕಂಪನಿಗಳ ಮೇಲೆ ಅಧಿಕ ಟ್ಯಾಕ್ಸ್ ವಿಧಿಸಬೇಕು. ಖಾಸಗಿ ಶಾಲೆಗಳಲ್ಲೂ ಕನ್ನಡ ಕಲಿಕೆ ಕಡ್ಡಾಯ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ರು.