’ಡೇವಿಡ್ ಜಾಗು ದಿ ವೇಕೆಂಟ್ ಹೌಸ್’ ಚಿತ್ರದ ನಾಯಕ ಶ್ರೇಯಸ್ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಆಹಾರ ಕಿಟ್ಗಳನ್ನ ವಿತರಿಸಿದ್ದಾರೆ. ಚಿತ್ರಮಂದಿರಗಳಾದ, ಪ್ರಸನ್ನ, ವೀರೇಶ್, ನವರಂಗ್, ಗೋವರ್ಧನ್, ವೀರಭದ್ರೇಶ್ವರ, ವಜ್ರೇಶ್ವರಿ, ಮಾರುತಿ, ಅಂಜನ್ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಅವರು ನೆರವಾಗಿದ್ದಾರೆ.
ಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಯುವ ನಟ ಶ್ರೇಯಸ್ ತಂಡ - ಡೇವಿಡ್ ಜಾಗು ದಿ ವೇಕೆಂಟ್ ಹೌಸ್
ಕೊರೊನಾ ಲಾಕ್ಡೌನ್ನಿಂದಾಗಿ ಚಿತ್ರಮಂದಿರಗಳನ್ನು ತೆರೆಯದೆ ವರ್ಷ ಉರುಳಿದೆ. ಇಂತಹ ಸಂದರ್ಭದಲ್ಲಿ ತೊಂದರೆಗೆ ಸಿಲುಕಿರುವ ದಿನಗೂಲಿ ಕಾರ್ಮಿಕರ ನೆರವಿಗೆ ಯುವನಟ ಶ್ರೇಯಸ್ ಹಾಗೂ ಅವರ ತಂಡ ನೆರವಾಗಿದೆ.
ಯುವ ನಟ ಶ್ರೇಯಸ್ ತಂಡ
ವರ್ಷದಿಂದೀಚೆಗೆ ಚಿತ್ರಮಂದಿರಗಳು ಬಂದ್ ಆಗಿದ್ದು ಕಾರ್ಯನಿರ್ವಹಿಸುತ್ತಿದ್ದವರು ಸಂಕಷ್ಟದಲ್ಲಿದ್ದರು. ಹೀಗಾಗಿ ಯುವ ನಟ ಹಾಗೂ ನಿರ್ದೇಶಕ ಶ್ರೇಯಸ್ ಆಹಾರ ಕಿಟ್ ವಿತರಿಸಲು ಮುಂದೆಬಂದಿದ್ದು, ಯುವನಟನ ಕಾರ್ಯಕ್ಕೆ ಕಾರ್ಮಿಕರು ಕೃತಜ್ಞತೆ ಅರ್ಪಿಸಿದ್ದಾರೆ.
ಇದನ್ನೂ ಓದಿ: ಬಹಳ ದಿನಗಳ ನಂತರ ಮತ್ತೆ ಪ್ರೇಕ್ಷಕರ ರಂಜಿಸಲು ಸಜ್ಜಾದ ರಿಯಾಲಿಟಿ ಶೋಗಳು