ಕರ್ನಾಟಕ

karnataka

ETV Bharat / sitara

ಡಿ.ಕೆ. ಶಿವಕುಮಾರ್ - ಶಿವರಾಜ ಕುಮಾರ್ ಭೇಟಿ, ನಡೆದ ಮಾತುಕತೆ ಏನು.!?

ರಾಜಕುಮಾರ್ ಕುಟುಂಬ ಇಡೀ ದೇಶಕ್ಕೆ ಗೊತ್ತಿರುವ ಕುಟುಂಬ. ಅವರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ‌. ಮೊದಲಿಂದಲೂ ಅಭಿಮಾನ ಆತ್ಮೀಯತೆ ಇದೆ. ಅವರು ಭೇಟಿಯಾಗಿ ವೈಯಕ್ತಿಕ ವಿಚಾರ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

Actor Shivraj kumar meet KPCC president DKShivkumar
ಡಿ.ಕೆ.ಶಿವಕುಮಾರ್ ಭೇಟಿಯಾದ ನಟ ಶಿವರಾಜ ಕುಮಾರ್

By

Published : Mar 15, 2021, 2:58 PM IST

Updated : Mar 15, 2021, 3:25 PM IST

ಬೆಂಗಳೂರು: ಜನಪ್ರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಇಂದು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಡಿ.ಕೆ. ಶಿವಕುಮಾರ್ - ಶಿವರಾಜ ಕುಮಾರ್ ಭೇಟಿ

ಶಿವರಾಜಕುಮಾರ್ ಭೇಟಿ ಬಳಿಕ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜಕುಮಾರ್ ಕುಟುಂಬ ಇಡೀ ದೇಶಕ್ಕೆ ಗೊತ್ತಿರುವ ಕುಟುಂಬ. ಅವರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ‌. ಮೊದಲಿಂದಲೂ ಅಭಿಮಾನ ಆತ್ಮೀಯತೆ ಇದೆ. ಅವರು ಭೇಟಿಯಾಗಿ ವೈಯಕ್ತಿಕ ವಿಚಾರ ಮಾತನಾಡಿದ್ದಾರೆ. ಇದೊಂದು ಸೌಜನ್ಯದ ಭೇಟಿಯಾಗಿತ್ತು ಎಂದು ಹೇಳಿದರು.

ಇತ್ತೀಚೆಗೆ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸಂಬಂಧ ಮಾತುಕತೆಗೆ ಭೇಟಿ ಕೊಟ್ಟಿದ್ದರು.‌ ಸೇರ್ಪಡೆ ದಿನಾಂಕ‌ ನಿಗದಿಯಾಗುವ ನಿರೀಕ್ಷೆ ಇದೆ. ಈ ಸಂದರ್ಭ ಮಧು ಬಂಗಾರಪ್ಪ ಸೇರ್ಪಡೆ ವಿಚಾರ ಹಾಗೂ ಮುಂದಿನ ಚುನಾವಣೆ ಸಂದರ್ಭ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ. ಮಧು ಬಂಗಾರಪ್ಪ ಪರ ಪ್ರಚಾರ ಮಾಡಿ ಗೆಲ್ಲಿಸಿಕೊಡುವ ಜವಾಬ್ದಾರಿ ಸಹ ಶಿವರಾಜ ಕುಮಾರ್ ವಹಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಈ ಹಿಂದೆ ಶಿವಕುಮಾರ್ ಪತ್ನಿ ಹಾಗೂ ಮಧು ಬಂಗಾರಪ್ಪ ಸೋದರಿಯಾಗಿರುವ ಗೀತಾ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದರು. ಬಿ.ವೈ. ರಾಘವೇಂದ್ರ ವಿರುದ್ಧ ಜೆಡಿಎಸ್​ನಿಂದ ಸ್ಪರ್ಧಿಸಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ:ನಾಲ್ಕು ದಿನಕ್ಕೆ 'ರಾಬರ್ಟ್' ಬಾಕ್ಸ್ ಆಫೀಸ್​ ಕೊಳ್ಳೆ ಹೊಡೆದಿದ್ದೆಷ್ಟು ಗೊತ್ತಾ..?

ಗೀತಾ ಶಿವರಾಜ ಕುಮಾರ್ ಅವರು ಕಾಂಗ್ರೆಸ್ ಸೇರುವ ಬಗ್ಗೆ ಕಾದು ನೋಡಿ. ಶಿವರಾಜ ಕುಮಾರ್ ಅವರು ನಮ್ಮ ಆತ್ಮೀಯರು. ಅವರ ಕುಟುಂಬ ಇಡೀ ದೇಶ ಹಾಗೂ ರಾಜ್ಯದ ಆಸ್ತಿ. ಆ ಕುಟುಂಬದ ಮೇಲೆ ನಮಗೆ ಅಪಾರ ಗೌರವವಿದೆ. ನಮಗೂ ಅವರ ಜತೆ ವೈಯಕ್ತಿಕ ಸಂಬಂಧಗಳಿವೆ. ನಾನು ಆ ಬಗ್ಗೆ ಹೆಚ್ಚು ಹೇಳುವುದಿಲ್ಲ. ಮಧು ಬಂಗಾರಪ್ಪ ಅವರಿಗೆ ಆ ಬಗ್ಗೆ ಮಾತನಾಡುವ ಹಕ್ಕಿದೆ. ಅವರು ಮಾತನಾಡಿದ್ದಾರೆ. ಸಂದರ್ಭ ಬಂದಾಗ ಗೀತಾ ಶಿವರಾಜ ಕುಮಾರ್ ಅವರೇ ಮಾತನಾಡುತ್ತಾರೆ ಎಂದರು.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಉತ್ತರಿಸಿದ ಅವರು, ಸದನದಲ್ಲಿ ನಮ್ಮ ಶಾಸಕಾಂಗ ಪಕ್ಷದ ನಾಯಕರು ಬಜೆಟ್ ಬಗ್ಗೆ ಮಾತನಾಡಲಿದ್ದಾರೆ. ನಂತರ ಸಂಜೆ ನಾವು ಹಿರಿಯ ನಾಯಕರ ಜತೆ ಚರ್ಚೆ ಮಾಡುತ್ತೇವೆ. ಆನಂತರ ಸಿಡಿ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.

Last Updated : Mar 15, 2021, 3:25 PM IST

For All Latest Updates

TAGGED:

ABOUT THE AUTHOR

...view details