ಕರ್ನಾಟಕ

karnataka

ETV Bharat / sitara

ಲಂಡನ್​ನಲ್ಲಿ ಶಿವಣ್ಣನ ಸಿಂಪಲ್ ಬರ್ತ್​​ಡೇ - undefined

ಶಸ್ತ್ರಚಿಕಿತ್ಸೆಗೆಂದು ಲಂಡನ್​​​ಗೆ ತೆರಳಿರುವ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಅಲ್ಲೇ ತಮ್ಮ ಬರ್ತ್​ಡೇ ಆಚರಿಸಿಕೊಂಡಿದ್ದಾರೆ.

ಶಿವಣ್ಣ

By

Published : Jul 12, 2019, 9:41 AM IST

56 ನೇ ವಸಂತಕ್ಕೆ ಕಾಲಿಡುತ್ತಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಪ್ರತಿ ವರ್ಷ ಅಭಿಮಾನಿಗಳ ಜತೆ ಬರ್ತ್​​ಡೇ ಆಚರಿಸಿಕೊಳ್ಳುತ್ತಿದ್ದ ಟಗರು ಶಿವಣ್ಣ ಈ ಬಾರಿ ಲಂಡನ್​​ನಲ್ಲಿ ಸಿಂಪಲ್​ ಆಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಶಿವಣ್ಣನ ಸಿಂಪಲ್ ಬರ್ತ್​​ಡೇ

ಲಂಡನ್​​ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸೆಂಚುರಿ ಸ್ಟಾರ್​ ಅಲ್ಲೇ ಕೇಕ್ ಕತ್ತರಿಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಂಡನ್​​ನಲ್ಲೇ ಇರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಶಿವರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಇನ್ನು ಶಿವಣ್ಣನಿಗೆ ‌‌ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಸದ್ಯ ವಿಶ್ರಾಂತಿ ಪಡೆಯುತ್ತಿರುವ ಭಜರಂಗಿ ಇನ್ನೂ 15 ದಿನಗಳ ಕಾಲ ಲಂಡನ್​​ಲ್ಲೇ ಉಳಿದುಕೊಳ್ಳಲಿದ್ದಾರೆ.

For All Latest Updates

TAGGED:

ABOUT THE AUTHOR

...view details