ಯುಗಾದಿ ಹಬ್ಬಕ್ಕೆ ಬೇವು-ಬೆಲ್ಲ ಸವಿಯಲು ಸಜ್ಜಾಗಿರುವ ಹುಬ್ಬಳ್ಳಿ-ಧಾರವಾಡದ ಅಭಿಮಾನಿಗಳಿಗೆ ಸರ್ಪ್ರೈಸ್ವೊಂದು ತೂರಿ ಬಂದಿದೆ. ಇದೇ 9 ರಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವಳಿನಗರಕ್ಕೆ ಭೇಟಿ ನೀಡಿ, ಫ್ಯಾನ್ಸ್ ಜೊತೆ 'ಕುಳಿತು' ಕವಚ ಸಿನಿಮಾ ವೀಕ್ಷಿಸಲಿದ್ದಾರೆ.
ಗಂಡುಮೆಟ್ಟಿದ ನಾಡು ಹುಬ್ಬಳ್ಳಿ ಫ್ಯಾನ್ಸ್‌ಗೆ ಟಗರು ಶಿವಣ್ಣ ಕೊಡ್ತಾರೆ ಯುಗಾದಿ ಗಿಫ್ಟ್.. - undefined
ನಟ ಶಿವಣ್ಣ ಫಸ್ಟ್ ಟೈಮ್ ಅಂಧನ ಪಾತ್ರದಲ್ಲಿ ನಟಿಸಿರುವ 'ಕವಚ' ಚಿತ್ರ ಇದೇ 5ರಂದು ರಾಜ್ಯಾದ್ಯಂತ ತೆರೆಕಾಣ್ತಿದೆ. ಈಗಾಗಲೇ ಹಾಡು ಹಾಗೂ ಟ್ರೈಲರ್‌ನಿಂದಾಗಿ ಸಿನಿಮಾ ಪ್ರಿಯರಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ನಟ ಶಿವಣ್ಣ
ಈ ಚಿತ್ರದಲ್ಲಿ ಕೃತಿಕಾ ಜಯಕುಮಾರ್, ವಸಿಷ್ಠ ಸಿಂಹ, ಬೇಬಿ ಮಿನಾಕ್ಷಿ, ರವಿಕಾಳೆ, ರಾಜೇಶ್, ಜಯಪ್ರಕಾಶ್, ತಬಲನಾಣಿ, ರಮೇಶ್ ಭಟ್, ಬಾಲರಾಜ್ ಮುಂತಾದವರ ತಾರಾ ಬಳಗವಿದೆ. ಅಣ್ಣ ತಂಗಿ ಬಾಂಧವ್ಯದ ಕಥೆಯನ್ನು ಹೊಂದಿರೋ ಚಿತ್ರ ತುಂಬಾನೇ ನಿರೀಕ್ಷೆ ಮೂಡಿಸಿದೆ. ಚಿತ್ರವನ್ನು ಜಿವಿಆರ್ ವಾಸು ನಿರ್ದೇಶನ ಮಾಡಿದ್ದಾರೆ. ರಾಹುಲ್ ಶ್ರೀವಾಸ್ತವ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಜೋ.ನಿ.ಹರ್ಷ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನವಿರುವ ಕವಚ ಸಿನಿಮಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.