ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ತನ್ನದೇ ಬೇಡಿಕೆ ಹೊಂದಿರುವ ನಟ ಶರಣ್. ಅಧ್ಯಕ್ಷ, ರ‍್ಯಾಂಬೊ, ವಿಕ್ಟರಿ ಬಳಿಕ ಈಗ 'ಅವತಾರ ಪುರುಷ'ನಾಗಿ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಈ ಮೂಲಕ ಪುಷ್ಕರ್ ಫಿಲ್ಮ್ಸ್ ಮತ್ತೊಮ್ಮೆ ಹೊಸ, ವಿಭಿನ್ನ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದ್ದಾರೆ.
ಪೋಸ್ಟರ್ ಹಾಗೂ ಹಾಡುಗಳಿಂದ ಟಾಕ್ ಆಗುತ್ತಿದ್ದ ಅವತಾರ ಪುರುಷ ಸಿನಿಮಾ ಬಿಡುಗಡೆ ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ, ಚಿತ್ರತಂಡ ಅಫೀಶಿಯಲ್ ಟೀಸರ್ ಬಿಡುಗಡೆ ಮಾಡುವ ಮೂಲಕ, ಅವತಾರ ಪುರುಷ ಚಿತ್ರದ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿದೆ.
ಮೇ 6ಕ್ಕೆ ರಾಜ್ಯಾದ್ಯಂತ ನಕ್ಕು ನಲಿಸಲು ವಿಕ್ಟರಿ ಹೀರೋ ಬರ್ತಾ ಇದ್ದಾರೆ. ಶರಣ್ ಸಿನಿಮಾ ಅಂದ್ರೆ ಕಾಮಿಡಿಗೇನು ಕಮ್ಮಿ ಇರಲ್ಲ. ಅವತಾರ ಪುರುಷ ಸಿನಿಮಾದಲ್ಲಿ ಶರಣ್ ಅವರು ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿರುವುದು ವಿಶೇಷ. ಹೀಗಾಗಿ, ಅವರು ಹಲವು ಗೆಟಪ್ಗಳಲ್ಲಿ ಶರಣ್ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾ ಹಾರರ್ ಕಾಮಿಡಿ ಎಲಿಮೆಂಟ್ ಹೊಂದಿದೆ. ಥ್ರಿಲ್ಲಿಂಗ್, ಸಸ್ಪೆನ್ಸ್, ಟ್ವಿಸ್ಟ್ಗಳಿವೆ. ಶರಣ್ ಜತೆಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಇವರಿಬ್ಬರಲ್ಲದೇ ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ, ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿ ಇನ್ನೂ ದೊಡ್ಡ ತಾರಾಬಳಗ ಈ ಸಿನಿಮಾದಲ್ಲಿದೆ.