ಕರ್ನಾಟಕ

karnataka

ETV Bharat / sitara

ಮ್ಯಾಟ್ನಿ ಸಿನಿಮಾದ ಶೂಟಿಂಗ್​ನಲ್ಲಿ ಬ್ಯೂಸಿಯಾದ ಸತೀಶ್​​-ರಚಿತಾ ರಾಮ್​​ - ಮ್ಯಾಟ್ನಿ ಸಿನಿಮಾ ಶೂಟಿಂಗ್​ನಲ್ಲಿ ಸತೀಶ-ರಚಿತಾ ರಾಮ್​

ಮ್ಯಾಟ್ನಿ ಸಿನಿಮಾದಲ್ಲಿ ನಟ ಸತೀಶ್ ನೀನಾಸಂ ಅಭಿನಯಿಸುತ್ತಿದ್ದು, ಇವರಿಗೆ ಜೊತೆಯಾಗಿ ಡಿಂಪಲ್​ ಕ್ವೀನ್​ ರಚಿತಾ ರಾಮ್​​ ಕಾಣಿಸಿಕೊಂಡಿದ್ದಾರೆ. ಸದ್ಯ ಸತೀಶ್​ ಮತ್ತು ರಚಿತಾ ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದಾರೆ.

Actor Satish and Rachita Ram busy in Myatni movie shooting
ಮ್ಯಾಟ್ನಿ ಸಿನಿಮಾದ ಶೂಟಿಂಗ್​ನಲ್ಲಿ ಬ್ಯೂಸಿಯಾದ ಸತೀಶ್​​ ಹಾಗೂ ರಚಿತಾ ರಾಮ್​​

By

Published : Jan 19, 2022, 5:41 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆ, ಪಾತ್ರಗಳಿಂದ ಬೇಡಿಕೆ ಹೊಂದಿರುವ ನಟ ಸತೀಶ್ ನೀನಾಸಂ ಸದ್ಯ ಪೆಟ್ರೋಮ್ಯಾಕ್ಸ್ ಸಿನಿಮಾದ ಡಬ್ಬಿಂಗ್ ಮುಗಿಸಿ ಮ್ಯಾಟ್ನಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಶೀರ್ಷಿಕೆಯಿಂದಲೇ ಸದ್ದು ಮಾಡ್ತಿರೋ ಮ್ಯಾಟ್ನಿ ಸಿನಿಮಾದ ನಾಲ್ಕನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿದ್ದು, ಸತೀಶ್​​ಗೆ ಜೋಡಿಯಾಗಿ ಡಿಂಪಲ್ ಕ್ವೀನ್​ ರಚಿತಾ ರಾಮ್​​ ನಟಿಸುತ್ತಿದ್ದಾರೆ. ಇಬ್ಬರು ಸಹನಟರು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಿರ್ದೇಶಕ ಮನೋಹರ್ ಕಂಪಲ್ಲಿಯವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ಲವ್ ಸ್ಟೋರಿ ಜೊತೆಗೆ ಕೌಟುಂಬಿಕ ಮೌಲ್ಯಗಳನ್ನು ಒಳಗೊಂಡಿದೆ.

ಮ್ಯಾಟ್ನಿ ಸಿನಿಮಾದ ಶೂಟಿಂಗ್​ನಲ್ಲಿ ಸತೀಶ್​​ ಹಾಗೂ ರಚಿತಾ ರಾಮ್​​ ಬ್ಯುಸಿ

'ಅಯೋಗ್ಯ' ಸಿನಿಮಾದ ಬಳಿಕ ಸತೀಶ್​ ಮತ್ತು ರಚಿತಾ ಮ್ಯಾಟ್ನಿ ಚಿತ್ರದ ಮೂಲಕ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ 60 ಭಾಗ ಮುಗಿದಿದ್ದು, ಉಳಿದ ಭಾಗದ ಶೂಟಿಂಗ್​ ಬೆಂಗಳೂರಲ್ಲಿ ನಡೆಯುತ್ತಿದೆ. ​ಮ್ಯಾಟ್ನಿ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಮತ್ತು ಕ್ರಾಂತಿ ವರ್ಲ ಛಾಯಾಗ್ರಹಣವಿದ್ದು, ಪಾರ್ವತಿ ಎಂಬುವವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಮ್ಯಾಟ್ನಿ ಸಿನಿಮಾದ ಶೂಟಿಂಗ್​ನಲ್ಲಿ ಸತೀಶ್​​ ಹಾಗೂ ರಚಿತಾ ರಾಮ್​​ ಬ್ಯುಸಿ

ಸತೀಶ್ ನಟನೆಯ ಹಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ಕೆ ಎಸ್ ನಂದೀಶ್ ಅವರ ನಿರ್ದೇಶನದ ಗೋದ್ರಾ ಮತ್ತು ವಿಜಯಪ್ರಸಾದ್ ಅವರ ಪೆಟ್ರೋಮ್ಯಾಕ್ಸ್ ಸಹ ಸೇರಿವೆ. ಅವರು ತಮ್ಮ ಮೊದಲ ತಮಿಳು ಚಿತ್ರವಾದ ಪಗೈವಾನುಕ್ಕು ಅರುಲ್ವೈ ಚಿತ್ರಮಂದಿರಗಳಿಗೆ ಬರಲು ಕಾಯುತ್ತಿದ್ದಾರೆ, ಇದು ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: 19.20.21 - ಇದು ರಾಷ್ಟ್ರ ಪ್ರಶಸ್ತಿ ನಿರ್ದೇಶಕನ ಹೊಸ ಸಿನಿಮಾ ಟೈಟಲ್!

ABOUT THE AUTHOR

...view details