ಕರ್ನಾಟಕ

karnataka

ETV Bharat / sitara

ನನಸಾಯಿತು ಸಾಯಿಕುಮಾರ್ ಕನಸು... ಭರಾಟೆಯಲ್ಲಿ ಧೂಳೆಬ್ಬಿಸಲಿದೆ ಸಹೋದರರ ಸಾಂಗತ್ಯ - undefined

ಡೈಲಾಗ್​ ಕಿಂಗ್​​ ಸಾಯಿ ಕುಮಾರ್​ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದವರು. ಎರಡೂವರೆ (25  ವರ್ಷ) ದಶಕಗಳ ಕಾಲ ಚಿತ್ರರಂಗದಲ್ಲಿ ಜೀವ ತೇದಿರುವ ಈ ಕಂಚಿನ ಕಂಠದ ಕಲಿ ಇದುವರೆಗೆ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ನಟ ಸಾಯಿ ಕುಮಾರ್

By

Published : Mar 16, 2019, 1:32 PM IST

Updated : Mar 16, 2019, 1:52 PM IST

ಹೀಗೆ ಕಲಾದೇವತೆ ಸೇವೆ ಮಾಡಿಕೊಂಡು ಬಂದಿರುವ ಮಾಸ್​ ಮಹಾರಾಜ ಸಾಯಿಗೆ ಒಂದು ಕನಸಿತ್ತು. ತಮ್ಮ ಇಬ್ಬರು ಸಹೋದರರ ಒಂದು ಚಿತ್ರ ಮಾಡಬೇಕು, ಮೂವರೂ ಬೆಳ್ಳಿ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಬೇಕು ಎಂದು ಅವರ ಮನದಲ್ಲಿ ಚಿಕ್ಕದೊಂದು ಆಸೆ ಹಾಗೇ ಉಳಿದುಕೊಂಡು ಬಿಟ್ಟಿತು. ಕಾರಣಾಂತರಗಳಿಂದ ಈ ಕನಸು ಚಿಗುರೊಡೆಯಲೇ ಇಲ್ಲ. ಆದರೆ, ಇದೀಗ ಅದು ಭರಾಟೆ ಚಿತ್ರದ ಮೂಲಕ ನನಸಾಗುತ್ತಿದೆ.

ನಟ ಸಾಯಿಕುಮಾರ್

ಹೌದು, ರೋರಿಂಗ್ ಸ್ಟಾರ್​ ಶ್ರೀಮುರಳಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಭರಾಟೆ ಚಿತ್ರದಲ್ಲಿ ಸಹೋದರರ ಸಮಾಗಮವಾಗಿದೆ. ಸಾಯಿ ಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಶರ್ಮಾ ಜತೆಯಾಗಿ ಭರಾಟೆ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ.

ಖಳ ನಟ ರವಿಶಂಕರ್

ಭರಾಟೆಯಲ್ಲಿ ಮುರಳಿ ಒಟ್ಟಾರೆ 10 ಖಳ ನಾಯಕರ ಜೊತೆ ಸೆಣಸಾಡಲಿದ್ದಾರೆ. ಭರ್ಜರಿ ಹಾಗೂ ಬಹದ್ದೂರ್ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರದಿಂದ ಹ್ಯಾಟ್ರಿಕ್​ ಹೊಡೆಯುವುದು ಗ್ಯಾರಂಟಿ ಎಂದು ಈಗಾಗಲೇ ಹೇಳಲಾಗುತ್ತಿದೆ.

ಶ್ರೀ ಮುರಳಿ ಹೊಡೆದಾಡುವ 10 ಖಳ ನಟರುಗಳು ಯಾರೆಂದರೆ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಶರ್ಮಾ, ಶರತ್ ಲೋಹಿತಾಶ್ವ, ಉಗ್ರಂ ಮಂಜು, ನೀನಾಸಂ ಅಶ್ವಥ್, ದೀಪಕ್, ರಾಜವಾಡೆ, ಮನಮೋಹನ್ ಹಾಗೂ ಇತರರು.

ನಟ ಅಯ್ಯಪ್ಪ ಶರ್ಮಾ

ಇನ್ನು ‘ಭರಾಟೆ’ ಚಿತ್ರದ ಕ್ಲೈಮಾಕ್ಸ್ ಸನ್ನಿವೇಶಕ್ಕೆ 80 ಬಾಡಿ ಬಿಲ್ಡರ್ಸ್, 400 ಸಹ ಕಲಾವಿದರು 8 ದಿವಸಗಳ ಕಾಲ ಪಾಲ್ಗೊಂಡಿದ್ದಾರೆ. ನೆಲಮಂಗಲದಲ್ಲಿ ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಒಂದು ದೊಡ್ಡ ಸೆಟ್ ರಚಿಸಿದ್ದಾರೆ. ಸುಪ್ರೀತ್ ಈ ಚಿತ್ರದ ನಿರ್ಮಾಪಕರು.

Last Updated : Mar 16, 2019, 1:52 PM IST

For All Latest Updates

TAGGED:

ABOUT THE AUTHOR

...view details