ಈಗಾಗಲೇ ಸಾಕಷ್ಟು ಡಬ್ಬಿಂಗ್ ಸಿನಿಮಾಗಳು ಸ್ಯಾಂಡಲ್ವುಡ್ಗೆ ಲಗ್ಗೆ ಇಟ್ಟಿವೆ. ಆದರೆ ಬಿಡುಗಡೆಯಾದ ಡಬ್ಬಿಂಗ್ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಕೊಚ್ಚಿ ಹೋಗಿವೆ. ಕಳೆದ ವಾರ ಬಿಡುಗಡೆಯಾದ 'ಡಿಯರ್ ಕಾಮ್ರೇಡ್' ಕೂಡಾ ಒಳ್ಳೆ ಪ್ರತಿಕ್ರಿಯೆ ಪಡೆದಿಲ್ಲ.
ಕನ್ನಡದ ಅನ್ನ ತಿಂದಿದ್ದೇನೆ..ಡಬ್ಬಿಂಗ್ ಕೆಲಸ ನನಗೆ ಬೇಡವೇ ಬೇಡ: ರಾಕ್ಲೈನ್ ಸುಧಾಕರ್ - kannada dubbing movies
ಸ್ಯಾಂಡಲ್ವುಡ್ನಲ್ಲಿ ಪರಭಾಷಾ ಚಿತ್ರಗಳೊಂದಿಗೆ ನಡುವೆ ಡಬ್ಬಿಂಗ್ ಚಿತ್ರಗಳ ಹಾವಳಿ ಕೂಡಾ ಹೆಚ್ಚಾಗಿದೆ. ಆದರೆ ನಾನು ಎಂದಿಗೂ ಡಬ್ಬಿಂಗ್ ಸಿನಿಮಾಗಳಿಗೆ ಪ್ರೋತ್ಸಾಹಿಸುವುದಿಲ್ಲ. ಅಲ್ಲದೆ ಪರಭಾಷಾ ಸಿನಿಮಾಗಳಿಗೆ ಕನ್ನಡ ಡಬ್ ಕೂಡಾ ಮಾಡುವುದಿಲ್ಲ ಎಂದು ರಾಕ್ಲೈನ್ ಸುಧಾಕರ್ ಹೇಳುತ್ತಾರೆ.
![ಕನ್ನಡದ ಅನ್ನ ತಿಂದಿದ್ದೇನೆ..ಡಬ್ಬಿಂಗ್ ಕೆಲಸ ನನಗೆ ಬೇಡವೇ ಬೇಡ: ರಾಕ್ಲೈನ್ ಸುಧಾಕರ್](https://etvbharatimages.akamaized.net/etvbharat/prod-images/768-512-3975139-thumbnail-3x2-rockline.jpg)
ಡಬ್ಬಿಂಗ್ ಸಿನಿಮಾಗಳನ್ನು ಕನ್ನಡಕ್ಕೆ ತರುವವರು ಅದನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಜನಪ್ರಿಯ ನಟರ ಕಂಠವನ್ನು ಉಪಯೋಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಟರ ಕಂಠವನ್ನು ಬಳಸಿಕೊಳ್ಳುವ ಮೂಲಕವಾದರೂ ಡಬ್ಬಿಂಗ್ ಸಿನಿಮಾಗಳಿಗೆ ಬಾಕ್ಸ್ ಆಫೀಸ್ ಗಳಿಸಿಕೊಳ್ಳುವ ಪ್ರಯತ್ನ ಇದು. ಡಬ್ಬಿಂಗ್ ವಿಚಾರವಾಗಿ ರಾಕ್ಲೈನ್ ವೆಂಕಟೇಶ್ ಅವರ ಗರಡಿಯಲ್ಲಿ ದಶಕಗಳ ಕಾಲ ಪಳಗಿರುವ ರಾಕ್ಲೈನ್ ಸುಧಾಕರ್ ಅವರನ್ನು ಕೇಳಿದಾಗ 'ನಾನು ಹಸಿವಿನಿಂದ ಬೇಕಾದರೂ ಇದ್ದು ಬಿಡುತ್ತೇನೆ ಆದರೆ ಆ ರೀತಿ ಕೆಲಸ ನನಗೆ ಬೇಡ' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳುತ್ತಾರೆ.
ಯೋಗರಾಜ್ ಭಟ್ಟರ ‘ಪಂಚರಂಗಿ’ ಸಿನಿಮಾದಿಂದ ಕಲಾವಿದರಾಗಿ ಗುರುತಿಸಿಕೊಂಡ ರಾಕ್ಲೈನ್ ಸುಧಾಕರ್ ಆರು ವರ್ಷಗಳಲ್ಲಿ ಸುಮಾರು 180 ಸಿನಿಮಾಗಳಲ್ಲಿ ನಟಿಸಿ ಹೆಸರಾಗಿರುವವರು. 'ಕನ್ನಡದ ಅನ್ನ ಉಂಡಿರುವವ ನಾನು, ಪ್ರೇಕ್ಷಕರು, ಮಾಧ್ಯಮಗಳು ನನ್ನನ್ನು ಬಹಳವಾಗಿ ಪ್ರೋತ್ಸಾಹ ಮಾಡುತ್ತಿದ್ದಾರೆ. ಡಬ್ಬಿಂಗ್ ಸಿನಿಮಾಕ್ಕೆ ನನ್ನ ಕಂಠದಾನ ಮಾಡಲು ಸಾಧ್ಯವೇ ಇಲ್ಲ. ಅಷ್ಟೊಂದು ಕಷ್ಟ ಬಂದರೆ ಪರಭಾಷೆಯಲ್ಲೇ ಅಭಿನಯಿಸೋಣ ಅದಕ್ಕೆ ನಾನೇ ಡಬ್ ಮಾಡುತ್ತೇನೆ ಆದರೆ ಡಬ್ಬಿಂಗ್ ಸಿನಿಮಾ ಬೇಡವೇ ಬೇಡ' ಎನ್ನುತ್ತಾರೆ ರಾಕ್ ಲೈನ್ ಸುಧಾಕರ್.