ತಮ್ಮ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳಿಗೆ ಉಡುಗೊರೆ ನೀಡಿರುವ ರಿಕ್ಕಿ, ತಮ್ಮ ಟ್ವಿಟರ್ ಅಕೌಂಟ್ನ್ನು ರೀ-ಆ್ಯಕ್ಟಿವ್ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಟ್ವಿಟರ್, ಇನ್ಸ್ಟಾಗ್ರಾಂನಿಂದ ದೂರವಿದ್ದ ಅವರು, ಅಭಿಮಾನಿಗಳ ಜತೆ ಒಡನಾಟ ಇಟ್ಟುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಹಿತೈಷಿ ಹಾಗೂ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಮತ್ತೆ ಸೊಷಿಯಲ್ ತಾಣಗಳಿಗೆ ವಾಪಾಸ್ ಬಂದಿದ್ದಾರೆ.
ಟ್ವಿಟರ್ಗೆ ರಿಕ್ಕಿ ರೀ-ಎಂಟ್ರಿ... ಸ್ಟ್ರಾಂಗ್ ಆಗಿದೆ ಫಸ್ಟ್ ಟ್ವೀಟ್ - ಫಸ್ಟ್ ಟ್ವಿಟ್
ಕಳೆದ ವರ್ಷ ಕೆಲವೊಂದು ವೈಯಕ್ತಿಕ ಕಾರಣಗಳಿಂದ ಸೋಷಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳಿದ್ದ ನಟ ರಕ್ಷಿತ್ ಶೆಟ್ಟಿ, ಇದೀಗ ಸೋಷಿಯಲ್ ಅಂಗಳಕ್ಕೆ ಮರು ಪ್ರವೇಶ ಮಾಡಿದ್ದಾರೆ.
ರಕ್ಷಿತ್ ರೀ-ಎಂಟ್ರಿ ಅವರ ಅಭಿಮಾನಿಗಳಿಗೆ ಸಂತಸದ ಜತೆಗೆ ಕುತೂಹಲ ಮೂಡಿಸಿತ್ತು. ಅವರ ಮೊದಲ ಟ್ವೀಟ್ ಏನಾಗಿರುತ್ತದೆ ಎನ್ನುವದನ್ನು ತಿಳಿಯಲು ಕೌತುಕದಿಂದ ಕಾಯುತ್ತಿದ್ದರು. ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಇಲ್ಲವೆ ಪೋಸ್ಟರ್ ಹಾಗೂ ಚಾರ್ಲಿ 777 ಸಿನಿಮಾದ ಹೊಸ ಪೋಸ್ಟರ್ ಹಂಚಿಕೊಳ್ಳಬಹುದು ಎನ್ನುವುದು ಅಭಿಮಾನಿಗಳ ಊಹೆಯಾಗಿತ್ತು. ಆದರೆ, ರಕ್ಷಿತ್ ಶೆಟ್ಟಿ ಮಾತ್ರ ಅರ್ಥಗರ್ಭಿತವಾದ ಪವರ್ಫುಲ್ ಮೆಸೇಜ್ವೊಂದನ್ನು ನೀಡಿದ್ದಾರೆ.
'ಚಂಡಮಾರುತ ಬೀಸೋ ಮೊದಲು ಎಲ್ಲವೂ ಶಾಂತವಾಗಿರುತ್ತದೆ ಅಲ್ಲವೇ ?' ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷದಿಂದ ಅವರು ಸೋಷಿಯಲ್ ಮೀಡಿಯಾದಲ್ಲಿ ಮೌನವಹಿಸಿದ್ದರು. ಜತೆಗೆ ಮೂರು ವರ್ಷಗಳಿಂದ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಇದೀಗ ಮತ್ತೆ ಟ್ವಿಟರ್ಗೆ ದಾಂಗುಡಿ ಇಟ್ಟಿರುವುದು, ಮುಂದಿನ ತಿಂಗಳು ಅವರ ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆಗುತ್ತಿರುವ ಹೊತ್ತಿನಲ್ಲಿ ಅವರ ಈ ಟ್ವೀಟ್ ಮಹತ್ವ ಪಡೆದುಕೊಂಡಿದೆ.