ಹೈದರಾಬಾದ್:ಡ್ರಗ್ಸ್ ಪ್ರಕರಣ(Drugs Case) ಸಂಬಂಧ ಟಾಲಿವುಡ್ ಮಾಸ್ ಮಹಾರಾಜ್ ಖ್ಯಾತಿಯ ನಟ ರವಿತೇಜ ಇಂದು ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಇವರ ಜೊತೆ ಸಹಾಯಕ ಮತ್ತು ಕಾರು ಚಾಲಕ ಶ್ರೀನಿವಾಸ್ ಇಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ.
Drugs Case: ಇಡಿ ವಿಚಾರಣೆಗೆ ಹಾಜರಾದ ಟಾಲಿವುಡ್ ಮಾಸ್ ಮಹಾರಾಜ ರವಿತೇಜ - Drugs Case,
ತೆಲುಗು ಚಿತ್ರರಂಗದಲ್ಲಿ ಕೇಳಿಬಂದ ಡ್ರಗ್ ಡೀಲಿಂಗ್ ಕೇಸ್ನಲ್ಲಿ ಖ್ಯಾತ ನಟ ರವಿತೇಜ ಅವರನ್ನು ಇಡಿ ವಿಚಾರಣೆಗೊಳಪಡಿಸಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಡ್ರಗ್ಸ್ ಕೇಸ್(Drugs Case)ನಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು.
![Drugs Case: ಇಡಿ ವಿಚಾರಣೆಗೆ ಹಾಜರಾದ ಟಾಲಿವುಡ್ ಮಾಸ್ ಮಹಾರಾಜ ರವಿತೇಜ actor-raviteja-](https://etvbharatimages.akamaized.net/etvbharat/prod-images/768-512-13013981-thumbnail-3x2-ravi.jpg)
ನಟ ರವಿತೇಜಾ
ಇದಕ್ಕೂ ಮೊದಲು ರವಿತೇಜ ಅವರಿಗೆ ಇಡಿ ಅಕ್ರಮ ಹಣ ವರ್ಗಾವಣೆ ಹಾಗೂ ಡ್ರಗ್ಸ್ ಕೇಸ್ ಸಂಬಂಧ ನೋಟಿಸ್ ನೀಡಿತ್ತು. 2017ರಲ್ಲಿ ದಾಖಲಾದ ಈ ಪ್ರಕರಣ ಸಂಬಂಧ ಈಗಾಗಲೇ ಹಲವರ ವಿಚಾರಣೆ ನಡೆಸಿರುವ ಇಡಿ, ನಟ ರವಿತೇಜಾ ಸೇರಿದಂತೆ ಒಟ್ಟು 12 ಮಂದಿಗೆ ನೋಟಿಸ್ ನೀಡಿತ್ತು.
ಇಡಿ ವಿಚಾರಣೆಗೆ ಹಾಜರಾದ ತೆಲುಗು ನಟ ರವಿತೇಜ
ಡ್ರಗ್ಸ್ ಸರಬರಾಜು ಮಾಡಿರುವ ಆರೋಪ ಎದುರಿಸುತ್ತಿರುವ ಕೆವಿನ್ ಸಹ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಈವರೆಗೆ ಇಡಿ ಇಲಾಖೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್, ನಟಿಯರಾದ ಚಾರ್ಮಿ, ರಕುಲ್ ಪ್ರೀತ್ ಸಿಂಗ್ ಮತ್ತು ನಟ ರಾಣಾ ದಗ್ಗುಬಾಟಿಯನ್ನು ವಿಚಾರಣೆ ನಡೆಸಿದೆ.
Last Updated : Sep 9, 2021, 2:20 PM IST