ಹೆಂಡತಿ ಹಾಗೂ ಇಬ್ಬರು ಮಕ್ಕಳ ಜೊತೆ ನಟ ರವಿಶಂಕರ್ ಗೌಡ 14 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಹೆಂಡತಿ ಮಕ್ಕಳ ಜೊತೆ ಹೋಂ ಕ್ವಾರಂಟೈನ್ಗೆ ಒಳಗಾದ ನಟ ರವಿಶಂಕರ್ ಗೌಡ - Actor Ravishankar Gowda
ರವಿಶಂಕರ್ ಗೌಡ ವಾಸವಿರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ನಿನ್ನೆ ಇಬ್ಬರಿಗೆ ಕೊರೊನಾ ವಕ್ಕರಿಸಿದೆ. ಈ ಹಿನ್ನೆಲೆ ಇವರು ತಮ್ಮ ಕುಟುಂಬ ಸಮೇತ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ರವಿಶಂಕರ್ ಗೌಡ ವಾಸವಿರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ನಿನ್ನೆ ಇಬ್ಬರಿಗೆ ಕೊರೊನಾ ವಕ್ಕರಿಸಿದೆ. ದುರಂತ ಅಂದರೆ ಅದರಲ್ಲಿ ಒಬ್ಬರು ರವಿಶಂಕರ್ ಗೌಡ ಎದುರು ಮನೆವಾಸಿ. ಆದ್ದರಿಂದ ಇವರು ವಾಸವಿರುವ ಫ್ಲೋರ್ಅನ್ನು ಲಾಕ್ ಮಾಡಿರುವ ಕಾರಣ ಈ ಕುಟುಂಬ ಹದಿನಾಲ್ಕು ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಗಾಗಿದೆ.
ರವಿಶಂಕರ್ ಎದುರು ಮನೆ ವ್ಯಕ್ತಿಗೆ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಕಿಚ್ಚ ಸುದೀಪ್ ,ಗಣೇಶ್, ಸೃಜನ್ ಲೋಕೇಶ್ ಸೇರಿದಂತೆ ಹಲವರು ಇವರನ್ನು ತಮ್ಮ ಮನೆಗೆ ಬರುವಂತೆ ಹೇಳಿದ್ದರು. ಆದರೆ, ಯಾರ ಮನೆಗೂ ಹೋಗದೆ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.