ಕರ್ನಾಟಕ

karnataka

ETV Bharat / sitara

'ವನ್ ಆ್ಯಂಡ್ ಒನ್ಲಿ ರವಿಚಂದ್ರನ್': ಸೋಶಿಯಲ್​ ಮೀಡಿಯಾಗೆ ಎಂಟ್ರಿ ಕೊಟ್ಟ 'ಕನಸುಗಾರ' - ರವಿಚಂದ್ರನ್ ಸೋಷಿಯಲ್ ಮೀಡಿಯಾ

ಸ್ಯಾಂಡಲ್​ವುಡ್‌ನ​ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರು ಯುಗಾದಿ ಹಬ್ಬದಂದು ಸೋಷಿಯಲ್ ಮೀಡಿಯಾಗೆ ಅಧಿಕೃತವಾಗಿ ಪ್ರವೇಶ ಮಾಡಿದ್ದಾರೆ.

Actor Ravichandran
ವನ್ ಆ್ಯಂಡ್ ಒನ್ಲಿ ರವಿಚಂದ್ರನ್

By

Published : Apr 14, 2021, 12:16 PM IST

ಇಷ್ಟು ವರ್ಷಗಳಿಂದ ರವಿಚಂದ್ರನ್ ಸೋಷಿಯಲ್ ಮೀಡಿಯಾದಿಂದ ವಿಮುಖರಾಗಿಯೇ ಇದ್ದರು. ಆದರೆ, ಇದೀಗ ಅವರು ಸಾಮಾಜಿಕ ಜಾಲತಾಣಗಳಿಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಯೂಟ್ಯೂಬ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತು ಟ್ವಿಟರ್​ಗಳಲ್ಲಿ ಖಾತೆ ತೆರೆದು ಸಕ್ರಿಯರಾಗಿದ್ದಾರೆ.

ಯುಗಾದಿ ಹಬ್ಬದಂದು ಸೋಷಿಯಲ್ ಮೀಡಿಯಾಗೆ ಅಧಿಕೃತವಾಗಿ ಬರುವುದಾಗಿ ರವಿಚಂದ್ರನ್ ಮೊದಲೇ ಹೇಳಿಕೊಂಡಿದ್ದರು.

ಪ್ರಮುಖವಾಗಿ, ಯೂಟ್ಯೂಬ್‍ನಲ್ಲಿ ಕೆಲವು ವಿಡಿಯೋಗಳನ್ನು ಕ್ರೇಜಿಸ್ಟಾರ್ ಹಂಚಿಕೊಂಡಿದ್ದಾರೆ. ಜೀವನದ ಬಗ್ಗೆ ತಾವೇ ರಚಿಸಿರುವ ಒಂದು ಹಾಡು, ಫ್ಯಾಮಿಲಿ ಮುಖ್ಯ ಎಂದು ಸಾರುವ ಒಂದು ವಿಡಿಯೋ, ತಂದೆ ವೀರಾಸ್ವಾಮಿ ಅವರಿಗೆ ಗೌರವ ಸಲ್ಲಿಸಿರುವ ವಿಡಿಯೋ ಮತ್ತು ಧೂಮಪಾನದಿಂದ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶ ಸಾರುವ ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‍ಗಳ ಮೂಲಕ ಶೇರ್ ಮಾಡಿದ್ದಾರೆ.

ರವಿಚಂದ್ರನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವುದನ್ನು ಕಂಡು ಹಲವರು ಅವರನ್ನು ಫಾಲೋ​ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರಂತೆ.

ABOUT THE AUTHOR

...view details