ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನ ಸಿಎಂ ಯಡಿಯೂರಪ್ಪ ಇಂದು ನೆರವೇರಿಸಿದ್ದಾರೆ. ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿ ಭವನದ ಎದುರಿಗೆ ಇರುವ ಜಾಗವನ್ನ ಬರೋಬ್ಬರಿ 10 ಕೋಟಿ ರೂಪಾಯಿಯಲ್ಲಿ ಖರೀದಿಸಲಾಗಿತ್ತು. ಈ ಜಾಗದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕ ಸಂಘದ ನೂತನ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ.
ಶಂಕು ಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನಟ ಕ್ರೇಜಿ ಸ್ಟಾರ್ ರವಿಚಂದ್ರನ್, ಕನ್ನಡ ನಿರ್ಮಾಪಕರಲ್ಲಿ ಮೊದಲು ಒಗ್ಗಟ್ಟು ಇರಲಿ ಅಂತಾ ಕಿವಿ ಮಾತು ಹೇಳಿದರು. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಿರ್ಮಾಪಕನು ಈ ಕಟ್ಟಡ ಕಟ್ಟೋದಿಕ್ಕೆ ಹಣ ನೀಡಬೇಕು.
ಮೊದಲು ನಾವು ಸ್ಟ್ರಾಂಗ್ ಆಗಿ ಇರಬೇಕು. ಒಂದು ಕಾಲದಲ್ಲಿ ಸ್ಟಾರ್ ನಿರ್ಮಾಪಕರು ಅಂತಾ ಇದ್ದರು. ನಮ್ಮ ತಂದೆ ವೀರಸ್ವಾಮಿ ಕಟ್ಟಿದ ಈಶ್ವರಿ ನಿರ್ಮಾಣ ಸಂಸ್ಥೆ, ಪಾರ್ವತಮ್ಮ ರಾಜ್ ಕುಮಾರ್ ಹುಟ್ಟು ಹಾಕಿದ ವಜ್ರೇಶ್ವರಿ ಸಂಸ್ಥೆ, ಕೆ ಸಿ ಎನ್ ಗೌಡರ ನಿರ್ಮಾಣ ಸಂಸ್ಥೆ ಇತ್ತು.
ಇಂದಿನ ನಿರ್ಮಾಪಕರು ಸ್ಟಾರ್ ನಟರ ಹಿಂದೆ ಹೋಗುತ್ತಿದ್ದಾರೆ : ರವಿಚಂದ್ರನ್ ಇದನ್ನೂ ಓದಿ :ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡದ ಶಂಕು ಸ್ಥಾಪನೆಗೆ ಸಿಎಂ ಚಾಲನೆ
ಆಗ ಸ್ಟಾರ್ ಪ್ರಾಡ್ಯೂಸರ್ ಅನ್ನೋ ಕಾಲ ಇತ್ತು. ಈಗ ಸ್ಟಾರ್ ನಟರ ನಿರ್ಮಾಪಕರು ಅಂತಾ ಆಗಿದೆ. ಮೊದಲು ನಾನು ಇಷ್ಟು ಕೋಟಿ ಖರ್ಚು ಮಾಡಿ ಸಿನಿಮಾ ಮಾಡ್ತಾ ಇದ್ದೀನಿ, ಇಂತಹ ಸ್ಟಾರ್ ಸಿನಿಮಾ ಮಾಡ್ತಾ ಇದ್ದೀನಿ ಅಂತಾ ಹೇಳೋದನ್ನ ನಿಲ್ಲಿಸಿ, ಮೊದಲು ನಾನು ಇಂತಹ ಕಥೆ ಮಾಡ್ತಾ ಇದ್ದೀನಿ, ಈ ಸಿನಿಮಾದಲ್ಲಿ ಇಂತಹ ನಟ ಇದ್ದಾನೆ ಅಂತಾ ಹೇಳಿ ನಿರ್ಮಾಪಕರ ಏನು ಅಂತಾ ಗೊತ್ತಾಗುತ್ತೆ ಎಂದರು.
ಯಾವಾಗ ನೀವು ಸ್ಟಾರ್ ಹಿಂದೆ ಹೋಗ್ತಾ ಇರ್ತೀರೋ ಆಗ ನಿರ್ಮಾಪಕ ಸಂಘ ಹೀಗೆ ಇರುತ್ತೆ ಅಂತಾ ರವಿಚಂದ್ರನ್ ನಿರ್ಮಾಪಕರಿಗೆ ಬುದ್ಧಿ ಹೇಳಿದರು. ಇನ್ನು ನಿರ್ಮಾಪಕ ಸಂಘ ಸ್ಟ್ರಾಂಗ್ ಆಗೋದಿಕ್ಕೆ ಮುಖ್ಯ ಕಾರಣ ನಿರ್ಮಾಪಕರು, ಇವತ್ತು ನಿರ್ಮಾಪಕ ಸಂಘದ ಕಟ್ಟಡ ಕಟ್ಟೋದಿಕ್ಕೆ ಪೂಜೆ ನಡೆದಿದೆ.
ಈ ಕಾರ್ಯಕ್ರಮಕ್ಕೆ ಎಷ್ಟು ಜನ ನಿರ್ಮಾಪಕರು ಬಂದಿದ್ದಾರೆ? ಯಾಕೇ ಬೇರೆಯವರು ಬಂದಿಲ್ಲ ಅಂತಾ ನೋಡಿದ್ರೆ ಒಗ್ಗಟ್ಟು ಇಲ್ಲಾ ಅನ್ನೋದು ಗೊತ್ತಾಗುತ್ತೆ ಅಂತಾ ರವಿಚಂದ್ರನ್ ಕೆಲ ನಿರ್ಮಾಪಕರಿಗೆ ಮಾತಿನಲ್ಲೇ ಚಾಟಿ ಬೀಸಿದರು.
ಇದನ್ನೂ ಓದಿ : ನೆಟ್ಫ್ಲಿಕ್ಸ್ನಲ್ಲಿ ಭಾರತೀಯರಿಂದ ಅತೀ ಹೆಚ್ಚು ಚಲನಚಿತ್ರ ವೀಕ್ಷಣೆ
ಇದರ ಜೊತೆಗೆ ಈ ಕೊರೊನಾ ಟೈಮ್‌ನಲ್ಲಿ, ದೊಡ್ಡ ದೊಡ್ಡ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಯಾವಾಗ ರಿಲೀಸ್ ಮಾಡಬೇಕು ಅಂದುಕೊಂಡಿದ್ದೀರಾ? ಕೊರೊನಾ ಈಗಾಗ್ಲೇ ಹೋಗೋಲ್ಲ ಅದಕ್ಕೆ, ಮೊದಲು ದೊಡ್ಡ ದೊಡ್ಡ ನಿರ್ಮಾಪಕರು ದೊಡ್ಡ ನಟರ ಸಿನಿಮಾಗಳನ್ನು ರಿಲೀಸ್ ಮಾಡಬೇಕು ಅಂತಾ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರಿಗೆ ಕಿವಿ ಮಾತು ಹೇಳಿದರು.