ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟಿಸುತ್ತಿರುವ 'ತ್ರಿವಿಕ್ರಮ' ಸಿನಿಮಾದ ಪೋಸ್ಟರ್ ಲಾಂಚ್ ಆಗಿದೆ. ರಾಜಾಜಿನಗರದಲ್ಲಿರುವ ತಮ್ಮ ಮನೆಯಲ್ಲಿ ಪ್ರೇಮಲೋಕದ ದೊರೆ ರವಿಚಂದ್ರನ್ ಚಿತ್ರದ ಪೋಸ್ಟರ್ ಅನಾವರಣಗೊಳಿಸಿದ್ದಾರೆ.
ತ್ರಿವಿಕ್ರಮ ಫಸ್ಟ್ ಲುಕ್ ಲಾಂಚ್... ಮಗನ ಚಿತ್ರಕ್ಕೆ ಕ್ರೇಜಿ ಸ್ಟಾರ್ ಶುಭ ಹಾರೈಕೆ - ತ್ರಿವಿಕ್ರಮ' ಸಿನಿಮಾದ ಪೋಸ್ಟರ್
ವಿಕ್ರಮ್ ನಟಿಸುತ್ತಿರುವ ಚೊಚ್ಚಲ ಸಿನಿಮಾ 'ತ್ರಿವಿಕ್ರಮ' ಪೋಸ್ಟರ್ ಲಾಂಚ್ ಆಗಿದೆ.

ತ್ರಿವಿಕ್ರಮ ಫಸ್ಟ್ ಲುಕ್
ರೋಜ್ ಹಾಗೂ ಮಾಸ್ ಲೀಡರ್ ಚಿತ್ರಗಳ ನಿರ್ದೇಶಕ ಸಹನಾ ಮೂರ್ತಿ ತ್ರಿವಿಕ್ರಮ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು ಬಾಲಿವುಡ್ ನಟಿ ಆಕಾಂಕ್ಷ ಶರ್ಮಾ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇದೊಂದು ಪಕ್ಕಾ ಲವ್-ರೊಮ್ಯಾಂಟಿಕ್ ಚಿತ್ರವಾಗಿದ್ದು, ಬೆಂಗಳೂರು, ರಾಜಸ್ತಾನ, ದಾಂಡೇಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸೋ ಪ್ಲಾನ್ ಚಿತ್ರತಂಡಕ್ಕಿದೆ.
ಈ ಚಿತ್ರದ ಮತ್ತೊಂದು ವಿಶೇಷ ಏನಂದರೆ ಡ್ಯಾನ್ಸ್ ಕಿಂಗ್ ಪ್ರಭುದೇವ ಕೊರಿಯೋಗ್ರಾಫರ್ ಆಗಿ ವರ್ಕ್ ಮಾಡಲಿದ್ದಾರೆ. ಸದ್ಯ ಈ ಚಿತ್ರದ ಟೈಟಲ್ ಹಾಗೂ ಲುಕ್ಗಳು ಗಮನ ಸೆಳೆಯುತ್ತಿವೆ.