ಕರ್ನಾಟಕ

karnataka

ETV Bharat / sitara

ಬ್ಯಾಲೆನ್ಸ್‌ ಈಸ್ ಆರ್ಟ್‌ ಆಫ್‌ ಲಿವಿಂಗ್‌.. 'ರವಿ ಬೋಪಣ್ಣ'ನಾಗಿ ಹೊಸ ವರ್ಷಕ್ಕೆ ಕ್ರೇಜಿ ಶುಭಾಶಯ.. - ravi bopanna of ravichandran

ಅಪೂರ್ವ ಚಿತ್ರದ ಬಳಿಕ ರವಿಚಂದ್ರನ್ ನಿರ್ದೇಶನ ಮಾಡಿರುವ ರವಿ ಬೋಪಣ್ಣ ಸಿನಿಮಾ ಸಸ್ಪೆನ್ಸ್ ಜೊತೆಗೆ ಥ್ರಿಲ್ಲರ್ ಕಥೆ ಹೊಂದಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ರವಿ ಬೋಪಣ್ಣ, ಬಿಡುಗಡೆಗೆ ರೆಡಿಯಾಗಿದೆ..

ravichandran extends New Year wishes to people
ವಿಭಿನ್ನವಾಗಿ ಹೊಸ ವರ್ಷದ ಶುಭಾಶಯ ತಿಳಿಸಿದ ಕೇಜಿಸ್ಟಾರ್​ ರವಿಚಂದ್ರನ್​

By

Published : Jan 1, 2022, 3:31 PM IST

ಕನ್ನಡ ಚಿತ್ರರಂಗದ ಕನಸುಗಾರ, ರಣಧೀರ ಹೀಗೆ ಹಲವಾರು ಹೆಸರುಗಳಿಂದ ಕರೆಯಿಸಿಕೊಳ್ಳುವ ನಟ ಕ್ರೇಜಿ ಸ್ಟಾರ್ ರವಿಚಂದ್ರನ್‌ ಬಹಳ ವಿಭಿನ್ನವಾಗಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸದ್ಯ ರವಿ ಬೋಪಣ್ಣ ಸಿನಿಮಾ ಬಿಡುಗಡೆಗೆ ಸಜ್ಜಾಗಿರೋ ಅವರು, ಜೀವನ ಅಂದರೆ ಏನು, ಹೇಗಿರುತ್ತದೆ ಎಂಬುದನ್ನು ತಮ್ಮ ರವಿ ಬೋಪಣ್ಣ ಸಿನಿಮಾದ ಟೀಸರ್ ಜೊತೆಗೆ ಮನ ಹುಟ್ಟುವ ಸಂಭಾಷಣೆಗಳಿಂದ ಹೊಸ ವರ್ಷಕ್ಕೆ ವಿಶ್ ಮಾಡಿದ್ದಾರೆ.

ವಿಭಿನ್ನವಾಗಿ ಹೊಸ ವರ್ಷದ ಶುಭಾಶಯ ತಿಳಿಸಿದ ಕ್ರೇಜಿಸ್ಟಾರ್​ ರವಿಚಂದ್ರನ್​..

ಅಪೂರ್ವ ಚಿತ್ರದ ಬಳಿಕ ರವಿಚಂದ್ರನ್ ನಿರ್ದೇಶನ ಮಾಡಿರುವ ರವಿ ಬೋಪಣ್ಣ ಸಿನಿಮಾ ಸಸ್ಪೆನ್ಸ್ ಜೊತೆಗೆ ಥ್ರಿಲ್ಲರ್ ಕಥೆ ಹೊಂದಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ರವಿ ಬೋಪಣ್ಣ, ಬಿಡುಗಡೆಗೆ ರೆಡಿಯಾಗಿದೆ.

ಈ ಚಿತ್ರದಲ್ಲಿ ರವಿ ಬೋಪಣ್ಣನಾಗಿ ರವಿಚಂದ್ರನ್ ಕಾಣಿಸಿಕೊಂಡರೆ, ರಾಮಕೃಷ್ಣ, ಜೈಜಗದೀಶ್, ರವಿಶಂಕರ್ ಗೌಡ, ಮೋಹನ್, ಕಾವ್ಯ ಶೆಟ್ಟಿ ಕೂಡ ಅಭಿನಯಿಸಿದ್ದಾರೆ.

ಕಿಚ್ಚ ಸುದೀಪ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಟನೆ ಜೊತೆಗೆ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಿಎಸ್‌ವಿ ಸೀತಾರಾಮ್ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ:ಎರಡನೇ ಮಗುವಿನ ನಿರೀಕ್ಷೆ; ಸಿಹಿ ಸುದ್ದಿ ಹಂಚಿಕೊಂಡ ನಟ ಕಮ್‌ ನಿರ್ದೇಶಕ ರಿಷಬ್ ಶೆಟ್ಟಿ

ಸದ್ಯ ಟೀಸರ್ ಹಾಗೂ ಪೋಸ್ಟರ್​ಗಳಿಂದ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ರವಿ ಬೋಪಣ್ಣ ಈ ವರ್ಷದಲ್ಲಿ ಬಿಡುಗಡೆ ಆಗಲಿದೆ.

ABOUT THE AUTHOR

...view details