2014ರಲ್ಲಿ ತೆರೆ ಕಂಡಿರುವ ದೃಶ್ಯ ಚಿತ್ರ ಈಗಾಗಲೇ ಸಿನಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೀಗ ಅದರ ಮುಂದುವರೆದ ಭಾಗ ದೃಶ್ಯ-2 ಚಿತ್ರ ತೆರೆ ಕಾಣಲು ಸಿದ್ಧಗೊಂಡಿದೆ. ಚಿತ್ರದಲ್ಲಿ ನಟನೆ ಮಾಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಇಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು.
ದೃಶ್ಯ 2 ಚಿತ್ರೀಕರಣದ ಬಗ್ಗೆ ಮಾಹಿತಿ ಹಂಚಿಕೊಂಡ ಚಿತ್ರತಂಡ ದೃಶ್ಯ ಸಿನಿಮಾದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದರು. ಇದೀಗ ದೃಶ್ಯ 2 ಸಿನಿಮಾ ಕೂಡ ನಿರ್ಮಾಣಗೊಂಡಿದ್ದು, ಚಿತ್ರೀಕರಣ ಮುಗಿಸಿದೆ.
ಈ ಬಗ್ಗೆ ಮಾತನಾಡೋದಿಕ್ಕೆ ರವಿಚಂದ್ರನ್, ನಟಿ ನವ್ಯಾ ನಾಯರ್, ನಿರ್ದೇಶಕ ಪಿ.ವಾಸು, ರವಿಚಂದ್ರನ್ ಮಕ್ಕಳಾಗಿ ನಟನೆ ಮಾಡಿರುವ ಆರೋಹಿ ನಾರಾಯಣ್, ಉನ್ನತಿ ಹಾಗೂ ಕಾರ್ಯಕಾರಿ ನಿರ್ಮಾಪಕರು ಸಿ.ವಿ.ಸಾರಥಿ ಉಪಸ್ಥಿತರಿದ್ದರು.
ದೃಶ್ಯ 2ಚಿತ್ರದಲ್ಲಿ ಆರೋಹಿ ನಟನೆ ಕುಟುಂಬ ಮಿಸ್ ಮಾಡಿಕೊಳ್ಳುತ್ತಿರುವ ನೋವಿದೆ ಎಂದ ರವಿಚಂದ್ರನ್
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರವಿಚಂದ್ರನ್, ದೃಶ್ಯ-2 ಸಿನಿಮಾ ಒಂದು ಫ್ಯಾಮಿಲಿ ಇದ್ದಂಗೆ, 38 ದಿನಗಳ ಕಾಲ ಚಿತ್ರೀಕರಣ ಮಾಡಿ ಕುಂಬಳಕಾಯಿ ಹೊಡೆಯುತ್ತಿದ್ದೇವೆ. ಇವತ್ತು ಕೊನೆ ದಿನದ ಶೂಟಿಂಗ್ ಮುಗಿದಿದೆ. ಇವರನ್ನೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ನನಗೂ ಸೇರಿದಂತೆ ತುಂಬಾ ನೋವಾಗುತ್ತಿದೆ. ನನ್ನ ಮನಸ್ಸಿನಿಂದ ಹೇಳ್ತಾ ಇದ್ದೀನಿ ದೃಶ್ಯ-2 ಸಿನಿಮಾ ಚಿತ್ರೀಕರಣ ಬಹಳ ಅದ್ಭುತವಾಗಿ ಮೂಡಿ ಬಂದಿದೆ ಎಂದರು. ಇದೇ ವೇಳೆ, ಕೊರೊನಾ ಭಯಬಿಟ್ಟು ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡರು.
ಮಲಯಾಳಂ ಸಿನಿಮಾಗಿಂತಲೂ ವಿಭಿನ್ನ
ನಿರ್ದೇಶಕ ಪಿ. ವಾಸು ಮಾತನಾಡಿ, ಮಲಯಾಳಂ ಸಿನಿಮಾಗಿಂತ ಕನ್ನಡದ ದೃಶ್ಯ-2 ಸಿನಿಮಾದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ಅದರಲ್ಲಿ ಮುಖ್ಯವಾಗಿ ಏಳು ವರ್ಷವಾದರೂ ರವಿಚಂದ್ರನ್ ಹಾಗೆ ಇರೋದು, ದೃಶ್ಯ 2 ಸಿನಿಮಾಗೆ ಪ್ಲೆಸ್ ಪಾಯಿಂಟ್ ಆಗಿತ್ತು. ಇಡೀ ದೃಶ್ಯ-2 ಚಿತ್ರದಲ್ಲಿ ಎಮೋಷನ್ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದರು.
ರವಿಚಂದ್ರನ್ ಪತ್ನಿ ಪಾತ್ರದಲ್ಲಿ ನವ್ಯಾ ನಾಯರ್ ಅಭಿನಯಿಸಿದ್ದು, ಮತ್ತೊಮ್ಮೆ ರವಿಚಂದ್ರನ್ ಹಾಗೂ ನಿರ್ದೇಶಕ ಪಿ. ವಾಸು ಜೊತೆ ಕೆಲಸ ಮಾಡಿರುವುದು ತುಂಬಾನೇ ಹೆಮ್ಮೆ ಇದೆ ಎಂದರು. ರವಿಚಂದ್ರನ್ ಸರ್ ಗುಡ್ ಹ್ಯೂಮನ್ ಬಿಯಿಂಗ್ ಪರ್ಸನ್. ರವಿ ಸರ್ ಸಿನಿಮಾಗಳನ್ನ ನೋಡಿಲ್ಲ. ಆದರೆ, ಹೀರೋಯಿನ್ಗಳಿಗೆ ರವಿ ಸರ್ ಬಗ್ಗೆ ಇರುವ ಅಭಿಮಾನ ಬೇರೆ ನಟರಲ್ಲಿ ನೋಡಿಲ್ಲ ಎಂದರು.
ದೊಡ್ಡ ತಾರಬಳಗವೇ ನಟನೆ
ಚಿತ್ರದಲ್ಲಿ ರವಿಚಂದ್ರನ್ ಮಕ್ಕಳಾಗಿ ಆರೋಹಿ ನಾರಾಯಣ್ ಹಾಗೂ ಉನ್ನತಿ ನಟನೆ ಮಾಡಿದ್ದಾರೆ. ದೃಶ್ಯ 2 ಚಿತ್ರದಲ್ಲಿ ಹಿರಿಯನಟ ಅನಂತನಾಗ್, ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಕೊರೊನಾ ಸೋಂಕು ಕಡಿಮೆ ಆದ ಮೇಲೆ ದೃಶ್ಯ-2 ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಇದನ್ನೂ ಓದಿರಿ: ನಟಿ ಆರೋಹಿ ಜೊತೆ ಈಟಿವಿ ಭಾರತ ಚಿಟ್ಚಾಟ್...ದೃಶ್ಯ-2 ಚಿತ್ರದ ಬಗ್ಗೆ ಏನೆಲ್ಲ ಹೇಳಿದ್ರು!
ಚಿತ್ರಕ್ಕೆ ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣವಿದ್ದು, ಸುರೇಶ್ ಅರಸ್ ಸಂಕಲನ, ರವಿ ಸಂತೆಹುಕ್ಲು ಅವರ ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ , ಭರತ್ ಅವರ ನಿರ್ಮಾಣ ನಿರ್ವಹಣೆ ಇದೆ. ಮಲಯಾಳಂನ ‘ದೃಶ್ಯಂ 2’ ಸಿನಿಮಾ ಇದೀಗ ಕನ್ನಡಕ್ಕೆ ರಿಮೇಕ್ ಆಗಿದೆ.