ಕರ್ನಾಟಕ

karnataka

ETV Bharat / sitara

'ಕನ್ನಡಿಗ' ಬಳಿಕ 'ರಮ್ಯ ರಾಮಸ್ವಾಮಿ' ಆಗಲಿದ್ದಾರೆ ಕ್ರೇಜಿಸ್ಟಾರ್! - ರಮ್ಯ ರಾಮಸ್ವಾಮಿ ಸಿನಿಮಾ

ಸ್ಯಾಂಡಲ್‌ವುಡ್‌ನ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಇದೀಗ ಮತ್ತೊಂದು ಸಿನಿಮಾದಲ್ಲಿ ನಟನೆ ಮಾಡಲು ಒಪ್ಪಿಕೊಂಡಿದ್ದು, ಅದಕ್ಕೆ ‘ರಮ್ಯ ರಾಮಸ್ವಾಮಿ’ ಎಂದು ಹೆಸರಿಡಲಾಗಿದೆ.

Actor Ravichandran announced new Movie
Actor Ravichandran announced new Movie

By

Published : Feb 9, 2022, 2:10 AM IST

ಕನ್ನಡ ಚಿತ್ರರಂಗದ ಶೋ ಮ್ಯಾನ್‌ ಖ್ಯಾತಿಯ ಕ್ರೇಜಿಸ್ಟಾರ್ ರವಿಚಂದ್ರನ್ ಸದ್ಯ ಒಂದರ ಹಿಂದೆ ಇನ್ನೊಂದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ದೃಶ್ಯ-2, ಕನ್ನಡಿಗ ಚಿತ್ರ ಬಿಡುಗಡೆ ಆಗಿ, ಸಿನಿಮಾ ಪ್ರಿಯರ ಮೆಚ್ಚುಗೆ ಗಳಿಸಿವೆ. ಈ ಸಕ್ಸಸ್ ಖುಷಿಯಲ್ಲಿರೋ ಕ್ರೇಜಿಸ್ಟಾರ್ ಈಗ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

'ರಮ್ಯ ರಾಮಸ್ವಾಮಿ' ಎಂದು ಟೈಟಲ್ ಇರುವ ಹೊಸ ಸಿನಿಮಾವದಲ್ಲಿ ರವಿಮಾಮ ರಾಮಸ್ವಾಮಿ ಅಗಲಿದ್ದಾರೆ. ಕನ್ನಡಿಗ ಸಿನಿಮಾ ನಿರ್ಮಾಪಕ ಎನ್.ಎಸ್.ರಾಜಕುಮಾರ್ ಜೊತೆ ಈ ಸಿನಿಮಾ ಮಾಡ್ತಾ ಇದ್ದು, ಸಮರ, ದತ್ತ, ಆರ್ಯನ್ ಸಿನಿಮಾಗಳ ನಿರ್ದೇಶಕ ಚಿ.ಗುರುದತ್ ,‌ಮೊದಲ ಬಾರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ತೆಲುಗಿನ ಖ್ಯಾತ ಕಥೆಗಾರ ಜನಾರ್ದನ ಮಹರ್ಷಿ ಕಥೆ ಬರೆದು, ಚಿ.ಗುರುದತ್ ನಿರ್ದೇಶನ ಮಾಡಲಿರುವ ಈ ಚಿತ್ರದ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ರಮ್ಯ ಪಾತ್ರದಲ್ಲಿ ಯಾರು ನಟಿಸುತ್ತಿದಾರೆಂಬ ಕುತೂಹಲ ಎಲ್ಲರಲ್ಲೂ ಇದೆ. ಆ ಪಾತ್ರದಲ್ಲಿ ಖ್ಯಾತ ನಟಿಯೊಬ್ಬರು ನಟಿಸಲಿದ್ದು, ಯಾರು ನಟಿಸುತ್ತಾರೆಂಬುದನ್ನು ಸದ್ಯದಲ್ಲೇ ತಿಳಿಸಲಾಗುವುದೆಂದು ನಿರ್ಮಾಪಕರು ತಿಳಿಸಿದ್ದಾರೆ.

ಇದನ್ನೂ ಓದಿರಿ:ಆಸ್ಕರ್​ ಅವಾರ್ಡ್ ಪಟ್ಟಿಯಲ್ಲಿಲ್ಲ ಜೈಭೀಮ್​ ಸಿನಿಮಾ.. ಅಭಿಮಾನಿಗಳಲ್ಲಿ ಭಾರಿ ಬೇಸರ

ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ ಹಾಗೂ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿರಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿರುವ ಎನ್​ಎಸ್ ರಾಜಕುಮಾರ್ ತಮ್ಮ ಓಂಕಾರ್ ಫಿಲಂಸ್ ಮೂಲಕ "ರಮ್ಯ ರಾಮಸ್ವಾಮಿ" ಎಂಬ ಚಿತ್ರವನ್ನು ಸದ್ಯದಲ್ಲೇ ಆರಂಭಿಸಲಿದ್ದಾರೆ.

ABOUT THE AUTHOR

...view details