ಕರ್ನಾಟಕ

karnataka

ETV Bharat / sitara

ಜಗ್ಗೇಶ್​ ಮನೆಗೆ ಲಗ್ನ ಪತ್ರಿಕೆ ಹಂಚಲು ಬಂದ 'ರಣಧೀರ' ಮೂಕವಿಸ್ಮಿತರಾಗಿದ್ದೇಕೆ ? - ಕ್ರೇಜಿಸ್ಟಾರ್​ ರವಿಚಂದ್ರನ್

ರವಿಚಂದ್ರನ್ ಪುತ್ರಿ ಗೀತಾಂಜಲಿ ಮದುವೆ ಮೇ 28-29 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಈಗಾಗಲೇ ಲಗ್ನಪತ್ರಿಕೆ ಹಂಚುವ ಕೆಲಸ ಭರದಿಂದ ಸಾಗುತ್ತಿದೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Apr 26, 2019, 12:16 PM IST

ಕ್ರೇಜಿಸ್ಟಾರ್​ ರವಿಚಂದ್ರನ್ ಮಗಳ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದ ಸ್ನೇಹಿತರಿಗೆ, ಆಪ್ತರಿಗೆ, ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ. ಖುದ್ದು ತಾವೇ ಎಲ್ಲರ ಮನೆಗಳಿಗೆ ತೆರಳುತ್ತಿರುವ ರವಿಮಾಮ, ಮದುವೆಯ ಕರೆಯೋಲೆ ನೀಡಿ ಆಹ್ವಾನಿಸುತ್ತಿದ್ದಾರೆ.

ನಿನ್ನೆಯಷ್ಟೆ ನವರಸ ನಾಯಕ ಜಗ್ಗೇಶ್​ ಅವರ ಮನೆಗೆ ರವಿಚಂದ್ರನ್​ ಹೋಗಿದ್ದರು. ಈ ವೇಳೆ ವಿಶೇಷ ಪ್ರಸಂಗಕ್ಕೆ ಜಗ್ಗೇಶ್ ಮನೆ ಸಾಕ್ಷಿಯಾಯಿತು. ಈ ಮನೆಯಲ್ಲಿದ್ದ ದೇವರಕೋಣೆ ನೋಡಿ ರಣಧೀರ ಒಂದು ಕ್ಷಣ ಮೂಕವಿಸ್ಮಿತರಾಗಿದ್ದಾರೆ.

ರವಿಚಂದ್ರನ್​ ಅವರ 'ರಣಧೀರ' ಚಿತ್ರದಲ್ಲಿ ಜಗ್ಗೇಶ್​ ಸೈಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ತಮಗೆ ಅವಕಾಶ ಕರುಣಿಸಿದ ಪ್ರೇಮಲೋಕದ ದೊರೆ ಬಗ್ಗೆ ಸಮಯ ಸಿಕ್ಕಾಗಲೆಲ್ಲ ಜ್ಞಾಪಿಸಿಕೊಂಡು, ರವಿಚಂದ್ರನ್ ಹೃದಯ ವೈಶಾಲ್ಯತೆ ಬಗ್ಗೆ ಹೇಳುತ್ತಿರುತ್ತಾರೆ. ಅಂದು ರವಿಚಂದ್ರನ್ ಅವರು ನೀಡಿದ ಸಂಭಾವನೆಯಲ್ಲಿ ಖರೀದಿಸಿದ ದೇವರ ಮೂರ್ತಿಗೆ ಇಂದಿಗೂ ಜಗ್ಗೇಶ್ ಮನೆಯಲ್ಲಿ ನಿತ್ಯ ಪೂಜೆ ಸಲ್ಲಿಕೆಯಾಗುತ್ತದೆ.

ನಿನ್ನೆ ತಮ್ಮ ಮನೆಗೆ ಆಗಮಿಸಿದ ರವಿಚಂದ್ರನ್ ಅವರನ್ನು ದೇವರಕೋಣೆಗೆ ಕರೆದೊಯ್ದ ಜಗ್ಗಣ್ಣ, ದೇವರ ವಿಗ್ರಹ ತೋರಿಸಿದ್ದಾರೆ. ಇದನ್ನು ಕಂಡು ರಣಧೀರ ಮೂಕವಿಸ್ಮಿತರಾದರು ಎಂದು ಜಗ್ಗೇಶ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ABOUT THE AUTHOR

...view details