ಕರ್ನಾಟಕ

karnataka

ETV Bharat / sitara

ಮಾನವೀಯತೆಗೆ ಇನ್ನೊಂದು ಹೆಸರೇ ಪುನೀತ್; ಅಪ್ಪು ನಿವಾಸಕ್ಕೆ ಭೇಟಿ ನೀಡಿದ ತೆಲುಗು ನಟ ರಾಮ್​​ಚರಣ್​ - Puneeth Rajkumar house

ನಮ್ಮ ಮನೆಗೆ ಅವರು ಬಂದಾಗ ನಮ್ಮನ್ನೇ ಅತಿಥಿಯಂತೆ ಸತ್ಕರಿಸಿದ್ದರು. ಅಷ್ಟರ ಮಟ್ಟಿಗೆ ಪುನೀತ್​ ಸ್ನೇಹಿಯಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು.

Actor RamCharan teja visits Puneeth Rajkumar house
ಅಪ್ಪು ನಿವಾಸಕ್ಕೆ ಭೇಟಿ ನೀಡಿದ ತೆಲುಗು ನಟ ರಾಮ್​​ಚರಣ್​

By

Published : Nov 3, 2021, 12:58 PM IST

Updated : Nov 3, 2021, 1:15 PM IST

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್​ವುಡ್​ ನಟ ಪುನೀತ್ ರಾಜ್​ಕುಮಾರ್ ಅವರ ನಿವಾಸಕ್ಕೆ ಟಾಲಿವುಡ್​ ನಟ ರಾಮ್​​ಚರಣ್ ತೇಜ್​ ಭೇಟಿ ನೀಡಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವು ಎಲ್ಲರಿಗೂ ಬರುತ್ತದೆ. ಆದರೆ, ಪುನೀತ್ ಇಷ್ಟು ಬೇಗ ಅಗಲಿದ್ದು ಜೀರ್ಣಿಸಿಕೊಳ್ಳಲು ಆಗದ ವಿಚಾರ. ಪುನೀತ್ ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದರು ಎಂದು ಅವರ ಒಡನಾಟವನ್ನು ಸ್ಮರಿಸಿಕೊಂಡರು.

ತೆಲುಗು ನಟ ರಾಮ್​​ಚರಣ್ ತೇಜ್​

ನಮ್ಮ ಮನೆಗೆ ಅವರು ಬಂದಾಗ ನಮ್ಮನ್ನೇ ಅತಿಥಿಯಂತೆ ಸತ್ಕರಿಸಿದ್ದರು. ಅಷ್ಟರ ಮಟ್ಟಿಗೆ ಸ್ನೇಹಿಯಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅವರ ಮನೆಯ ಮದುವೆ ಸಮಾರಂಭದಲ್ಲಿ ಅವರನ್ನ ಕೊನೆಯದಾಗಿ ಭೇಟಿಯಾಗಿದ್ದೆ.

ಇದು ಸಿನಿಮಾರಂಗಕ್ಕೆ ತುಂಬಲಾಗದ ನಷ್ಟ. ಕುಟುಂಬದವರನ್ನೇ ಕಳೆದುಕೊಂಡ ನೋವಾಗಿದೆ. ಮಾನವೀಯತೆಗೆ ಇನ್ನೊಂದು ಹೆಸರೇ ಪುನೀತ್ ಎಂದು ವಿಧಿಯಾಟಕ್ಕೆ ಹಿಡಿಶಾಪ ಹಾಕಿದ ರಾಮ್​​ಚರಣ್, I LOVE YOU AND MISS YOU PUNEETH ಅಂತ ಭಾವುಕರಾದರು.

Last Updated : Nov 3, 2021, 1:15 PM IST

ABOUT THE AUTHOR

...view details