ಕರ್ನಾಟಕ

karnataka

ETV Bharat / sitara

ಕನ್ನಡ ಸಿನಿಮಾದಲ್ಲಿ ನಟಿಸ್ತಾರಂತೆ ಮಗಧೀರ - ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ

ರಾಮ್ ಚರಣ್ ತೇಜಾ ಕೂಡ, ಮೊದಲ ಬಾರಿಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ನಿರ್ದೇಶಕ ರಾಜಮೌಳಿ. ಮೊದಲಿಗೆ ಕನ್ನಡದಲ್ಲಿ ಅಭ್ಯಾಸ ಮಾಡಿ ನಂತರ ರಾಮ್ ಚರಣ್ ತೇಜಾ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ರಾಮ್ ಚರಣ್ ತೇಜಾಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡೋದಕ್ಕೆ ವರದರಾಜ್ ಎಂಬುವರು ಸಹಾಯ ಮಾಡಿದರಂತೆ..

ರಾಮ್ ಚರಣ್ ತೇಜಾ
ರಾಮ್ ಚರಣ್ ತೇಜಾ

By

Published : Dec 10, 2021, 6:45 PM IST

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮೋಸ್ಟ್ ಕ್ರಿಯೇಟಿವ್ ಡೈರೆಕ್ಟರ್ ಅಂತಾ ಕರೆಯಿಸಿಕೊಳ್ಳುತ್ತಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ, ಬಾಹುಬಲಿ 2 ಸಿನಿಮಾ ಬಳಿಕ ನಿರ್ದೇಶನ ಮಾಡಿರೋ ಸಿನಿಮಾ RRR. ತೆಲುಗು ಚಿತ್ರರಂಗದ ಇಬ್ಬರು ಸ್ಟಾರ್ ನಟರಾದ ಜೂನಿಯರ್ ಎನ್‌ಟಿಆರ್ ಹಾಗೂ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಈ ಚಿತ್ರದಲ್ಲಿ ಅಭಿನಯಸಿದ್ದಾರೆ.

ಒಳ್ಳೆ ಪಾತ್ರ ಸಿಕ್ಕರೆ ಕನ್ನಡದಲ್ಲಿ ನಟಿಸ್ತಾರಂತೆ ಮಗಧೀರ..

ಈ ತ್ರಿವಳಿ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತೀರೋ RRR ಸಿನಿಮಾ, ಸದ್ಯ ಟ್ರೈಲರ್‌ನಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವ RRR ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗುವ ಮೂಲಕ ಕನ್ನಡದಲ್ಲಿ ಬಿಡುಗಡೆ ಆಗುತ್ತಿದೆ‌.

ಈ ಹಿನ್ನೆಲೆಯಲ್ಲಿ ಈ ಸಿನಿಮಾ ಪ್ರಚಾರಕ್ಕಾಗಿ ನಿರ್ದೇಶಕ ರಾಜಮೌಳಿ, ನಟರಾದ ಜ್ಯೂ. ಎನ್​​ಟಿಆರ್, ರಾಮ್ ಚರಣ್ ತೇಜಾ ಹಾಗೂ ಆಲಿಯಾ ಭಟ್ ಬೆಂಗಳೂರಿಗೆ ಬಂದಿದ್ದರು. ಒಂದು ಅಚ್ಚರಿ ಸಂಗತಿ ಅಂದರೆ, ಜೂನಿಯರ್ ಎನ್​​ಟಿಆರ್ ಹಾಗೂ ರಾಮ್ ಚರಣ್ ತೇಜಾ ಫಸ್ಟ್ ಟೈಮ್​​​ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ.

ರಾಮ್ ಚರಣ್ ತೇಜಾ ಕೂಡ, ಮೊದಲ ಬಾರಿಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ನಿರ್ದೇಶಕ ರಾಜಮೌಳಿ. ಮೊದಲಿಗೆ ಕನ್ನಡದಲ್ಲಿ ಅಭ್ಯಾಸ ಮಾಡಿ ನಂತರ ರಾಮ್ ಚರಣ್ ತೇಜಾ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ರಾಮ್ ಚರಣ್ ತೇಜಾಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡೋದಕ್ಕೆ ವರದರಾಜ್ ಎಂಬುವರು ಸಹಾಯ ಮಾಡಿದರಂತೆ.

ಇನ್ನು ಮೆಗಾಸ್ಟಾರ್ ಚಿರಂಜೀವಿಯಂತೆ ಮಗ, ರಾಮ್ ಚರಣ್ ತೇಜಾ ಕೂಡ ಕರ್ನಾಟಕ ಹಾಗೂ ಕನ್ನಡ ಚಿತ್ರರಂಗದ ಜೊತೆ ಒಳ್ಳೆ ಬಾಂಧವ್ಯ ಹೊಂದಿದ್ದಾರೆ‌. ಮೆಗಾಸ್ಟಾರ್ ಚಿರಂಜೀವಿ ಕ್ರೇಜಿ ಸ್ಟಾರ್ ಜೊತೆ ಸಿಪಾಯಿ ಸಿನಿಮಾ ಹಾಗೂ ಶ್ರೀ ಮಂಜುನಾಥ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡದ ಕೋಟ್ಯಂತರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.

ಹೀಗಾಗಿ, ರಾಮ್ ಚರಣ್ ತೇಜಾ ಕೂಡ ಒಳ್ಳೆ ಸಿನಿಮಾ ಹಾಗೂ ಒಳ್ಳೆ ಪಾತ್ರ ಸಿಕ್ಕರೆ ಕನ್ನಡದಲ್ಲಿ ಸಿನಿಮಾ ಮಾಡ್ತಿನಿ ಅಂತಾ ತಮ್ಮ ಆಸೆಯನ್ನ ಹೊರ ಹಾಕಿದರು. ಈ ಆಸೆಯನ್ನ ಕನ್ನಡದಲ್ಲಿ ಯಾವ ನಿರ್ದೇಶಕರು ಪೂರೈಸುತ್ತಾರೆ ಅನ್ನೋದು ಕಾಲವೇ ನಿರ್ಧರಿಸಲಿದೆ.

ಇದನ್ನೂ ಓದಿ : 'ಮಾತೃ ಭಾಷೆ'ಯಲ್ಲಿ ಮಾತನಾಡಿದ ಯಂಗ್​ ಟೈಗರ್​​ ಜೂ. ಎನ್​ಟಿಆರ್​​

ABOUT THE AUTHOR

...view details