ಕರ್ನಾಟಕ

karnataka

ETV Bharat / sitara

ಗೌರಿ ಗಣೇಶ್ ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಬಿಚ್ಚಿಟ್ರು ನಾರಾಯಣನ‌ ರಹಸ್ಯ...! - ಅವನೇ ಶ್ರೀಮನ್ನಾರಾಯಣ ಸಿನಿಮಾ

ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾ ಟೀಸರ್ ಸಖತ್​ ಸದ್ದು ಮಾಡಿತ್ತು. ಸದ್ಯ ಈ ಸಿನಿಮಾದ ಡಬ್ಬಿಂಗ್, ಮ್ಯೂಸಿಕ್, ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಈ ವೇಳೆ ಬಿಡುವು ಮಾಡಿಕೊಂಡ ರಕ್ಷಿತ್​ ಫೇಸ್​ಬುಕ್​ ಲೈವ್​ಗೆ ಬಂದು ಅಭಿಮಾನಿಗಳಿಗೆ ಈ ಚಿತ್ರದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

avane sharman narayan

By

Published : Sep 2, 2019, 10:08 PM IST

ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ಶ್ರೀಮನ್ನಾರಾಯಣನಾಗಿ ತೆರೆಯ ಮೇಲೆ ಬರಲು ಸಿದ್ಧಗೊಂಡಿದ್ದು, ಬಹುದಿನಗಳ ಬಳಿಕ ಫೇಸ್‍ಬುಕ್ ಲೈವ್ ಬಂದಿದ್ದ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕುರಿತ ವಿಷಯಗಳನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.

ನಿಮಗೆಲ್ಲಾ ಗೊತ್ತಿರೋ ಹಾಗೆ ಅವನೇ ಶ್ರೀಮನ್ನಾರಾಯಣ ಚಿತ್ರದ ಫಸ್ಟ್ ಲುಕ್ ಟೀಸರ್ ಕ್ಲಾಸ್, ಮಾಸ್ ಎರಡೂ ವರ್ಗದವರನ್ನೂ ಸೆಳೆದಿತ್ತು. ಆದಾದ ನಂತರ ಸೈಲೆಂಟಾಗಿ ಸಿನಿಮಾ ಮೇಕಿಂಗ್​ನಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಇದೀಗ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡ ರಕ್ಷಿತ್​ ಫೇಸ್​ಬುಕ್​ ಲೈವ್​ಗೆ ಬಂದು ಅಭಿಮಾನಿಗಳಿಗೆ ಈ ಸಿನಿಮಾದ ಕುರಿತ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಕನ್ನಡದ ಅತಿದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾಗಿರೋ ಅವನೇ ಶ್ರೀಮನ್​ನಾರಾಯಣ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದ್ದು, ಸದ್ಯ ಸಿನಿಮಾದ ಡಬ್ಬಿಂಗ್, ಅಜನೀಶ್ ಲೋಕನಾಥ್ ಸಾರಥ್ಯದಲ್ಲಿ ಬ್ಯಾಕ್‍ಗ್ರೌಂಡ್ ಮ್ಯೂಸಿಕ್, ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಸಿನಿಮಾದ ಕೆಲಸವೆಲ್ಲ ಅಂದುಕೊಂಡಂತೆ ಮುಗಿದರೆ ಇದೇ ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಇದನ್ನು ಐದು ಭಾಷೆಯಲ್ಲಿ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಿದ್ಧವಾಗಿದ್ದು, ರಕ್ಷಿತ್ ಅವರ ವೃತ್ತಿ ಬದುಕಿನ ಮಹೋನ್ನತ ಸಿನಿಮಾ ಇದಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೆಚ್.ಕೆ ಪ್ರಕಾಶ್ ಗೌಡ ನಿರ್ಮಾಣ, ಸಚಿನ್ ರವಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು, ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಂಡಿದ್ದು, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಹಾಗೂ ಬಾಲಾಜಿ ಮನೋಹರ್ ಮುಖ್ಯಪಾತ್ರಗಳಲ್ಲಿ ಮಿಂಚಿದ್ದಾರೆ.

ಸತತ ಮೂರು ವರ್ಷಗಳ ಪರಿಶ್ರಮಕ್ಕೆ ಈ ವರ್ಷಾಂತ್ಯಕ್ಕೆ ಪ್ರತಿಫಲ ಸಿಗುವ ನಿರೀಕ್ಷೆಯಲ್ಲಿ ನಟ ರಕ್ಷಿತ್ ಶೆಟ್ಟಿ ತಮ್ಮ ಚಿತ್ರದ ಬಗ್ಗೆ ಇಷ್ಟು ವಿಚಾರಗಳನ್ನ ತಿಳಿಸುವ ಜೊತೆಗೆ ಇಲ್ಲಿಂದ ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಚಾರದ ಕೆಲಸ ಶುರುವಾಗಲಿದೆ ಎನ್ನುವ ಸೂಚನೆಯ್ನನೂ ಕೊಟ್ಟಿದ್ದಾರೆ.

ABOUT THE AUTHOR

...view details