ಕರ್ನಾಟಕ

karnataka

ETV Bharat / sitara

ನಾನು ಯಾವುದಕ್ಕೂ ಯಾವ ವಿಷಯಕ್ಕೂ ತಲೆಕೆಡಿಸಿಕೊಂಡಿಲ್ಲ: ನಟ ರಕ್ಷಿತ್ ಶೆಟ್ಟಿ - ರಕ್ಷಿತ್ ಶೆಟ್ಟಿ

ಖಾಸಗಿ ಸುದ್ದಿವಾಹಿನಿಯೊಂದು ನಟ ರಕ್ಷಿತ್ ಶೆಟ್ಟಿ ಕುರಿತು ಮಾಡಿದ್ದ ಕಾರ್ಯಕ್ರಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ನನ್ನ ವಿರುದ್ಧ ಕಾರ್ಯಕ್ರಮ ಮಾಡಿದವರ ಮೇಲೆ ನಾನು ಸೇಡು ತೀರಿಸಿಕೊಳ್ಳಲು ಸುದ್ದಿಗೋಷ್ಠಿ ನಡೆಸಿಲ್ಲ. ಈ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಆದರೆ ನಾನು ಪ್ರತಿಕ್ರಿಯಿಸಲೇಬೇಕು ಎಂದು ಇದೆಲ್ಲ ಮಾಡಿದ್ದೇನೆ ಎಂದಿದ್ದಾರೆ.

actor-rakshith-shetty
ನಟ ರಕ್ಷಿತ್ ಶೆಟ್ಟಿ

By

Published : Jul 11, 2021, 9:46 PM IST

ಬೆಂಗಳೂರು:ನಾನು ಯಾವುದಕ್ಕೂ ಯಾವ ವಿಷಯಕ್ಕೂ ತಲೆಕೆಡಿಸಿಕೊಂಡಿರಲಿಲ್ಲ, ಆದರೆ‌ ಇತ್ತೀಚೆಗೆ ಬಂದ ಈ ಒಂದು ಕಾರ್ಯಕ್ರಮ ಎಲ್ಲೆಯನ್ನು ಮೀರಿ ಮಾಡಿದ ಕಾರ್ಯಕ್ರಮವಾಗಿತ್ತು, ಹಾಗಾಗಿ ನಾನು ಪ್ರತಿಕ್ರಿಯಿಸಲೇಬೇಕು ಎಂದು ಇಷ್ಟೆಲ್ಲಾ ಹೇಳುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ನಟ‌ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಎಲ್ಲರಿಗೂ ಉತ್ತರ ಕೊಡೋಕೆ‌ ಆಗದೆ ನಾನು ಫೋನ್ ಸ್ವಿಚ್ ಆಫ್‌ ಮಾಡಿಕೊಂಡಿದ್ದೆ, ಖಾಸಗಿ ಚಾನೆಲ್​​​ ನನ್ನ ಮೇಲೆ ಮಾಡಿದ್ದ ಆರೋಪಗಳಿಗೆ ಉತ್ತರ ಕೊಡಲೇಬೇಕಾಗಿತ್ತು. ಈ ಕಾರಣಕ್ಕಾಗಿ ಕೊನೆ ಕ್ಷಣದಲ್ಲಿ ‌ಪ್ರೆಸ್ ಮೀಟ್‌ ಕರೆದಿದ್ದೇನೆ ಎಂದು ಖಾಸಗಿ ಮಾಧ್ಯಮವೊಂದು ಮಾಡಿದ್ದ ಕಾರ್ಯಕ್ರಮ ಸಂಬಂಧ ಮಲ್ಲೇಶ್ವರದ ರೇಣುಕಾಂಬ ಥಿಯೇಟರ್​​​ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ನಾನು ಯಾವುದಕ್ಕೂ ಯಾವ ವಿಷಯಕ್ಕೂ ತಲೆಕೆಡಿಕೊಂಡಿಲ್ಲ: ನಟ ರಕ್ಷಿತ್ ಶೆಟ್ಟಿ

ಮೊದಲು ಈ ಬಗ್ಗೆ ಪ್ರತಿಕ್ರಿಯಿಸಲು ಇಷ್ಟ ಇರಲಿಲ್ಲ, ನನ್ನ ಅಮ್ಮ ಫೋನ್ ಮಾಡಿದ್ದರು, ಜುಲೈ 11ಕ್ಕೆ ನಾನು ರಿಯಾಕ್ಟ್ ಮಾಡುತ್ತೇನೆ ಎಂದು ಹೇಳಿದೆ, ಆ ಪೋಸ್ಟ್​ಗೆ ಜನ ಕೊಟ್ಟ ಪ್ರತಿಕ್ರಿಯೆಯಿಂದ ಅಮ್ಮನ ಮನಸ್ಸಿಗೆ ಸಮಾಧಾನವಾಯಿತು ಎಂದರು.

ಇನ್ನು ಮುಂದೆ ಇಂತಹ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಮಾಡಲು ಬಹಳ ಕೆಲಸವಿದೆ. ನನ್ನ ಕೆಲಸ ಸಿನಿಮಾ ಮಾಡುವುದು, ಅದನ್ನು ಮಾಡುತ್ತೇನೆ. ಈಗ ಹೊಂಬಾಳೆ ಜೊತೆ ಸಿನಿಮಾ ಮಾಡುತ್ತಿದ್ದೇನೆ. ಸಿನಿಮಾ ಬಗ್ಗೆ ಅಷ್ಟೇ ತಲೆ ಕೆಡಿಸಿಕೊಳ್ಳುತ್ತೇನೆ ಎಂದಿದ್ದಾರೆ.

ರಿಚರ್ಡ್ ಆಂಟನಿ ಬಗ್ಗೆ ರಕ್ಷಿತ್ ಮಾತು:
ರಿಚರ್ಡ್ ಆಂಟನಿ ಚಿತ್ರದ ಬಗ್ಗೆ ರಕ್ಷಿತ್ ಮಾತನಾಡಿ, 8 ವರ್ಷದ ನಂತರ ನಾನು ನಿರ್ದೇಶನ ಮಾಡುತ್ತಿದ್ದೇನೆ, ಹೊಂಬಾಳೆ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ. ಸಿನಿಮಾ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ, ಬೇರೆಲ್ಲಾ ಬಿಟ್ಟು ಬಿಡಿ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದಾರೆ ಎಂದು ನಟ ತಿಳಿಸಿದರು.

ABOUT THE AUTHOR

...view details