ರಕ್ಷಿತ್, ಬೀದಿ ನಾಯಿಗಳಿಗೆ ಒಳ್ಳೆಯ ಲೈಫ್ ಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಅನಿಮಲ್ ವೆಲ್ಫೇರ್ ಸಂಸ್ಥೆ 'ಕೇರ್' ಜತೆಗೆ ಕೈ ಜೋಡಿಸಿದ್ದಾರೆ. ಇದೇ 15 ರಂದು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ನಾಯಿಗಳ ದತ್ತು ಮೇಳ ಆಯೋಜಿಸಲಾಗಿದೆ. ನಾಯಿಗಳನ್ನು ಸಾಕಲು ಬಯಸುವವರು ಇಲ್ಲಿ ಬಂದು ದತ್ತು ಪಡೆಯಿರಿ ಎಂದಿದ್ದಾರೆ.
'ಬೀದಿ ನಾಯಿಗಳಿಗೆ ಸುಂದರ ಬದುಕು ಕಲ್ಪಿಸಿ'... ಶ್ವಾನ ಪ್ರಿಯರಿಗೆ ರಕ್ಷಿತ್ ಮನವಿ - ಆ್ಯನಿಮಿಲ್ ವೆಲ್ಫೇರ್ ಸಂಸ್ಥೆ ಕೇರ್
ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ಬೀದಿ ನಾಯಿಗಳ ಬಗ್ಗೆ ವಿಶೇಷ ಕಾಳಜಿ ತೋರಿದ್ದಾರೆ. ಫಾರಿನ್ ತಳಿ ಬದಲು ನಮ್ಮ ದೇಸಿ ನಾಯಿಗಳನ್ನೇ ಸಾಕಿ ಎಂದು ಸಲಹೆ ನೀಡಿದ್ದಾರೆ.
ನಾವು ಮನೆಗಳಲ್ಲಿ ವಿದೇಶಿ ತಳಿಯ ನಾಯಿಗಳನ್ನೇ ಸಾಕಬೇಕೆನ್ನುವ ಭ್ರಾಂತಿಯಲ್ಲಿದ್ದೇವೆ. ಆದರೆ ಇವುಗಳಿಗಿಂತ ನಮ್ಮ ಭಾರತೀಯ ನಾಯಿಗಳೇ ಸಾಕಲು ಉತ್ತಮ. ಇವುಗಳು ಬೇಗನೆ ಬೆಳೆಯುತ್ತವೆ, ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಈ ಶ್ವಾನಗಳು ಆರೋಗ್ಯವಾಗಿರುತ್ತವಲ್ಲದೆ, ಗಟ್ಟಿಮುಟ್ಟಾರುತ್ತವೆ. ಕಡಿಮೆ ಖರ್ಚಿನಲ್ಲಿ ಇವುಗಳನ್ನು ಸಾಕಬಹುದು. ಇಂದು ಸಾಕಷ್ಟು ಬೀದಿ ನಾಯಿಗಳು ದಿಕ್ಕಿಲ್ಲದೆ ಅಲೆಯುತ್ತಿವೆ. ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿವೆ. ಹೊಟ್ಟೆಗೆ ತಿನ್ನಲು ಆಹಾರವಿಲ್ಲದೇ ಹಸಿವಿನಿಂದ ಮರಣ ಹೊಂದುತ್ತಿವೆ. ಇಂತಹ ಅನಾಥ ನಾಯಿಗಳಿಗೆ ಸುಂದರ ಬದುಕು ಕಲ್ಪಿಸಲು ನಾವೆಲ್ಲರು ಮುಂದಾಗಬೇಕಿದೆ. ಆದ್ದರಿಂದ ನಿಮ್ಮ ಮನೆಗೆ ಹೊಸ ಅತಿಥಿಯನ್ನು ಹೊಂದಲು ಬಯಸುವವರ ಬೀದಿ ನಾಯಿಗಳನ್ನು ದತ್ತು ಪಡೆಯಿರಿ ಎಂದು ರಕ್ಷಿತ್ ಶೆಟ್ಟಿ ಮನವಿ ಮಾಡಿದ್ದಾರೆ.