ಇನ್ನೇನು ರಾಘಣ್ಣನ ಸಿನಿ ಕರಿಯರ್ ಮುಗಿಯಿತು. ಅವರು ಇನ್ಮೇಲೆ ಬಣ್ಣ ಹಚ್ಚುತ್ತಾರೋ ಇಲ್ವೋ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ, ಅವರು ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಫಿನಿಕ್ಸ್ನಂತೆ ಮತ್ತೇ ಎದ್ದು ಬಂದು ಪರದೆಯ ಮೇಲೆ 'ಅಮ್ಮನ ಮನೆ' ಚಿತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಪುನರಾಗಮನದ ಜೊತೆ ‘ತ್ರಯಂಬಕಂ’, ‘ಪೊಗರು’ ಕನ್ನಡ ಸಿನಿಮಾಗಳು ರಾಘಣ್ಣ ಅವರನ್ನು ಹುಡುಕಿಕೊಂಡು ಬಂದಿವೆ. ಅಮ್ಮನ ಮನೆ ಚಿತ್ರಕಥೆ ರಾಘಣ್ಣನ ನೀಜ ಜೀವನಕ್ಕೆ ಹತ್ತಿರವಾದಂತಿದೆ. ಈ ವಿಚಾರವನ್ನೇ ಅವರೇ ಹೇಳಿಕೊಂಡಿರುವ ರಾಘಣ್ಣ ಚಿತ್ರೀಕರಣ ಸಮಯದಲ್ಲಾದ ಒಂದು ಸಂದಿಗ್ಧ ಸಂದರ್ಭ ರಿವೀಲ್ ಮಾಡಿದ್ದಾರೆ.
ಅಮ್ಮನ ಮನೆ ಚಿತ್ರದಲ್ಲಿ ರಾಘಣ್ಣನ ತಾಯಿ ಪಾತ್ರ ಮಾಡಿರುವ ರೋಹಿಣಿ ಅವರುಸ್ಟ್ರೋಕ್ ಆಗಿ ಹಾಸಿಗೆ ಹಿಡಿದಿರುತ್ತಾರೆ. ಈ ಪಾತ್ರ ಪರಿಣಾಮಕಾರಿಯನ್ನಾಗಿಸಲು ರೋಹಿಣಿ ಅವರು ತಮ್ಮ ಅಭಿನಯಕ್ಕೆ ಟಿಪ್ಸ್ ಪಡೆಯುತ್ತಾ ಇದ್ದದ್ದೇ ರಾಘಣ್ಣ ಅವರಿಂದಂತೆ. ಒಮ್ಮೆಯಂತೂ 'ಸಾರ್ ನಿಮಗೆ ನಿಜ ಜೀವನದ ಅನುಭವ ಇದೆಯಲ್ಲ, ನನ್ನ ಪಾತ್ರದ ರೀತಿ ಸರಿಯಿದೆಯೇ ಎಂದು ಕೇಳಿದ್ದು ರಾಘಣ್ಣನಿಗೆ ಎಲ್ಲೋ ಒಂದು ಕಡೆ ಕರುಳು ಚುರುಕ್ ಅಂದಿತಂತೆ.
ನಿಜ ಜೀವನದಲ್ಲಿ ರಾಘಣ್ಣ ಅವರಿಗೂ ಸ್ಟ್ರೋಕ್ ಆಗಿತ್ತು. ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿ ಎಂದಿನಂತೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರು ನಟಿಸಿರುವ ಅಮ್ಮನ ಮನೆ ಚಿತ್ರ ಇದೇ 14 ರಂದು ಬಿಡುಗಡೆಯಾಗುತ್ತಿದೆ.