ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ ಅಂತಹ ಹಿಟ್ ಸಿನಿಮಾಗಳ ಹೀರೋ ರಾಘಣ್ಣ ಅವರ 25 ನೇ ಸಿನಿಮಾದ ಹೆಸರು ‘ಆಡಿಸಿದಾತ’. ಇದು ಸಹ ಡಾ!! ರಾಜಕುಮಾರ್ ಅವರ ‘ಕಸ್ತೂರಿ ನಿವಾಸ’ ಸಿನಿಮಾಕ್ಕೆ ಕನೆಕ್ಟ್ ಆಗುತ್ತದೆ. 'ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ' (ಚಿ ಉದಯಶಂಕರ್ ರಚನೆ) ....ಜಿ ಕೆ ವೆಂಕಟೇಶ್ ಅವರು ವಿರಹ ಧ್ವನಿಯಲ್ಲಿ ಹೇಳಿದ ಹಾಡಿನ ಸಾಲಿನಲ್ಲಿ ಬರುವ ಪದ ‘ಆಡಿಸಿದಾತ’ ಚಿತ್ರದ ಟೈಟಲ್.
30 ವರ್ಷಗಳ ಸಿನಿಮಾ ಪಯಣದಲ್ಲಿ ರಾಘಣ್ಣ ಅವರ ಈ ಸಿನಿಮಾಕ್ಕೆ ಮಹತ್ವ ಒದಗಿಬಂದಿದೆ. ಶ್ರೀ ಭದ್ರಕಾಳಮ್ಮ ಹಾಗೂ ಶ್ರೀ ವೀರ ಭದ್ರೇಶ್ವರ ಸ್ವಾಮಿ ಪ್ರೊಡಕ್ಷನ್ ಅಡಿ ಬಿ.ಎಂ ಚೇತನ್ ಈ ಚಿತ್ರದ ನಿರ್ಮಾಪಕರು. ಥ್ರಿಲ್ಲರ್ ಕಥಾ ಹಂದರದ ಈ ಚಿತ್ರಕ್ಕೆ ಹರೀಶ್ ಭಾರದ್ವಾಜ್ ನಿರ್ದೇಶನವಿರಲಿದೆ. 30 ದಿವಸ ಬೆಂಗಳೂರು ಹಾಗೂ ಮೈಸೂರು ಸುತ್ತ ಚಿತ್ರೀಕರಣ ಮಾಡಲಿದೆ.