ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಂಗಳ ಗೌರಿ ಮದುವೆ ಧಾರಾವಾಹಿಯ ವಿಲನ್ ಸೌಂದರ್ಯ ಆಗಿ ಅಭಿನಯಿಸಿದ್ದ ರಾಧಿಕಾ ವಿಭಿನ್ನ ರೀತಿಯ ಫೋಟೋ ಶೂಟ್ ಮೂಲಕ ತಾವು ತಾಯಿಯಾಗುತ್ತಿರುವ ಶುಭ ಸಮಾಚಾರವನ್ನು ಹೇಳಿದ್ದರು. ನ.20ರಂದು ರಾಧಿಕಾ ಶ್ರವಂತ್ ಅವರ ಬಾಳಿಗೆ ಪುಟ್ಟ ಲಕ್ಷ್ಮಿಯ ಆಗಮನವಾಗಿದೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ರಾಧಿಕಾ ರಾಧಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಶುಕ್ರವಾರ ಅಂದರೆ ನವೆಂಬರ್ 20 ರಂದು ರಾಧಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಟ್ ಈಸ್ ಎ ಬೇಬಿ ಗರ್ಲ್ ಎಂದು ಬರೆದಿರುವ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಾಧಿಕಾ ಶ್ರವಂತ್, ಹೆಣ್ಣು ಮಗು ಆಗಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೇ ಇದೇ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಇದೀಗ ಮುದ್ದು ಕಂದನ ಆಗಮನದಿಂದ ಖುಷಿಯಾಗಿದ್ದಾರೆ. ಎರಡು ಕನಸು, ಅಳಿಗುಳಿಮನೆ, ರಾಧಾ ಕಲ್ಯಾಣ, ಕಾದಂಬರಿ, ಮುಂಗಾರು ಮಳೆ, ಸ್ವಾತಿಮುತ್ತು, ಪುಟ್ಮಲ್ಲಿ ಧಾರಾವಾಹಿಯಲ್ಲಿ ಅಭಿನಯಿಸಿ ಮನೆ ಮಾತಾಗಿರುವ ರಾಧಿಕಾ ಕೊನೆಯ ಬಾರಿ ನಟಿಸಿದ್ದು ಮಂಗಳ ಗೌರಿ ಮದುವೆ ಹಾಗೂ ಅರಮನೆ ಗಿಳಿ ಧಾರಾವಾಹಿಯಲ್ಲಿ.
ನೆಗೆಟಿವ್ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿರುವ ರಾಧಿಕಾ ಸದ್ಯ ನಟನೆಯಿಂದ ದೂರವಿದ್ದು, ತಾಯ್ತನದ ಸಿಹಿ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಇನ್ನು ಶ್ರವಂತ್ ಅವರು ಕಿರುತೆರೆ, ಬೆಳ್ಳಿತೆರೆಯ ನಟರಾಗಿ ಗುರುತಿಸಿಕೊಂಡಿದ್ದರು. ಮಧುಬಾಲಾ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸಿರುವ ಶ್ರವಂತ್, ಪವಿತ್ರ, ನೆನಪಿದೆಯಾ, ಅಂಬಾರಿ, ಜಾತ್ರೆ, ಪರಾರಿ ಹಾಗೂ ಚಿಕ್ಕಮಗಳೂರು ಚಿಕ್ಕಮಲ್ಲಿಗೆ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಂಗನಾಯಕಿ ಧಾರಾವಾಹಿಯ ನಿರ್ದೇಶಕರಾಗಿದ್ದರು.