ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ನಾರದಬಂಡ ಗ್ರಾಮದ ಅಭಿಮಾನಗಳ ಸಾಮಾಜಿಕ ಕಾರ್ಯಕ್ಕೆ ದೊಡ್ಮನೆ ನಟ ಪುನೀತ್ ರಾಜಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳ ಕಾರ್ಯಕ್ಕೆ ಫಿದಾ...ರಾಯಚೂರಿನ ಯುವಕರಿಗೆ ಪುನೀತ್ ವಿಡಿಯೋ ಸಂದೇಶ - undefined
ಸಮಾಜಪರ ಕೆಲಸ ಮಾಡುತ್ತಿರುವ ಅಭಿಮಾನಿಗಳಿಗೆ ಕನ್ನಡ ಸಿನಿಮಾ ನಟ ಪುನೀತ್ ರಾಜಕುಮಾರ್ ಧನ್ಯವಾದ ಹೇಳಿದ್ದಾರೆ.
ಈ ಗ್ರಾಮದ ಯುವಕರು ವರನಟ ಡಾ.ರಾಜಕುಮಾರ್ ಕುಟುಂಬದ ದೊಡ್ಡ ಅಭಿಮಾನಿಗಳು. ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರನ್ನು ಹೃದಯಲ್ಲಿರಲಿ ಆರಾಧಿಸುವ ಅಪ್ಪಟ ಕಲಾರಸಿಕರು. ಈ ದೊಡ್ಮನೆ ನಟರ ಹುಟ್ಟುಹಬ್ಬಗಳಂದು ಶಾಲಾ ಮಕ್ಕಳಿಗೆ ನೋಟ್ ಬುಕ್, ಹಾಲು,ಹಣ್ಣು ವಿತರಿಸಿ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ ಕಟ್ಟಿಕೊಂಡು ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ.
ಅಭಿಮಾನಿಗಳ ಈ ಪ್ರೀತಿಗೆ, ಅವರ ಸೇವಾ ಮನೋಭಾವಕ್ಕೆ ಪುನೀತ್ ರಾಜಕುಮಾರ್ ಅವರು ಮನಸೋತಿದ್ದಾರೆ. ನಾರದಬಂಡ ಅಭಿಮಾನಿಗಳಿಗೆ ಅದರಲ್ಲೂ ವಿಶೇಷವಾಗಿ ಪ್ರಕಾಶ್ ಮತ್ತು ಅವರ ತಂಡಕ್ಕೆ ಧನ್ಯವಾದ ಹೇಳಿ ವಿಡಿಯೋ ಸಂದೇಶದ ಕಳುಹಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಅಪ್ಪು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.