ಬೆಂಗಳೂರು:ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ನಾವು ಯಾವತ್ತೂ ಮರೆಯೋಕೆ ಆಗಲ್ಲ. ಅವರ ಆರೋಗ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಟ ಪುನೀತ್ ರಾಜ್ಕುಮಾರ್ ಹಾರೈಸಿದ್ದಾರೆ.
ಎಸ್ಪಿಬಿ ಆದಷ್ಟು ಬೇಗ ಗುಣಮುಖರಾಗಿ ಬರಲಿ: ಪುನೀತ್ ಹಾರೈಕೆ - Sandalwood news
ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ ಎಸ್ಪಿಬಿ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಅಂತಾರಾಷ್ಟ್ರೀಯ ವೈದ್ಯರ ತಂಡ ಚಿಕಿತ್ಸೆಗೆ ಆಗಮಿಸಿದೆ. ಎಸ್ಪಿಬಿ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ನಟ ಪುನೀತ್ ರಾಜ್ಕುಮಾರ್ ಹಾರೈಸಿದ್ದು, ಅವರೊಂದಿಗಿನ ನೆನಪನ್ನು ಮೆಲುಕು ಹಾಕಿದ್ದಾರೆ.
ಆ ದಿನಗಳು ಖ್ಯಾತಿಯ ನಟ ಚೇತನ್ ಅಭಿನಯದ ‘ಮಾರ್ಗ’ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಸ್ವರ ಮಾಂತ್ರಿಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
ನನ್ನ ಭಾಗ್ಯಕ್ಕೆ ನಾನು ಒಂದು ಹಾಡಿನಲ್ಲಿ ನಟಿಸಿದ್ದ ‘ಮಾಯಾ ಬಜಾರ್’ ಚಿತ್ರದಲ್ಲಿ ಅವರು ಹಾಡಿದ್ದರು. ಅಲ್ಲದೆ ಬೆಟ್ಟದ ಹೂ ಚಿತ್ರದಲ್ಲಿ ಒಂದು ಹಾಡನ್ನು ಇಬ್ಬರೂ ಹಾಡಿದ್ದೇವೆ. ಇದಲ್ಲದೆ ಫೋನ್ನಲ್ಲಿ ಹಲವಾರು ಬಾರಿ ಮಾತನಾಡಿದ್ದೇವೆ. ನಾನು ನಾಯಕನಾಗಿ ಅಭಿನಯಿಸುವ ಚಿತ್ರದಲ್ಲಿ ಅವರಿಂದ ಹಾಡಿಸಲು ನನಗೆ ತುಂಬಾ ಇಷ್ಟ ಇತ್ತು ಎಂದು ಪುನೀತ್ ರಾಜ್ಕುಮಾರ್ ಹೇಳಿದರು. ಜೊತೆಗೆ ಆದಷ್ಟು ಬೇಗ ಅವರು ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.