ಪವರ್ ಸ್ಟಾರ್ ಪುನೀತ್ ರಾಜಕುಮಾರ್ 'ಕನ್ನಡದ ಕೋಟ್ಯಧಿಪತಿ' ರಿಯಾಲಿಟಿ ಶೋಗೆ ವಾಪಸ್ ಆಗಿದ್ದಾರೆ. ಯಶಸ್ವಿಯಾಗಿ ಎರಡು ಸೀಸನ್ ಹೋಸ್ಟ್ ಮಾಡಿದ್ದ ಪುನೀತ್ ಕಾರಣಾಂತರಗಳಿಂದ ಮೂರನೇ ಸೀಸನ್ನಿಂದ ಹೊರಗುಳಿದಿದ್ದರು. ಇದೀಗ ನಾಲ್ಕನೇ ಸೀಸನ್ಗೆ ಕಮ್ಬ್ಯಾಕ್ ಆಗಿದ್ದಾರೆ.
ಪುನೀತ್ ರಾಜಕುಮಾರ್ 'ಕನ್ನಡದ ಕೋಟ್ಯಧಿಪತಿ' ಒಪ್ಪಲು ಕಾರಣ ಏನ್ ಗೊತ್ತೆ? - undefined
ಕನ್ನಡದ ಕೋಟ್ಯಧಿಪತಿ ನಾಲ್ಕನೇ ಸೀಸನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ 22 ರಿಂದ ರಾತ್ರಿ 8 ಗಂಟೆಗೆ ಶನಿವಾರ ಹಾಗೂ ಭಾನುವಾರ ಪ್ರಸಾರ ಆಗಲಿದೆ. ಈ ಸೀಸನ್ನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಡೆಸಿಕೊಡಲಿದ್ದಾರೆ.
ಅಪ್ಪು, ಕನ್ನಡದ ಈ ಜನಪ್ರಿಯ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಬಂದವರು. ಬೆಳ್ಳಿ ಪರದೆಯಲ್ಲಿ ಸಿಕ್ಕ ಯಶಸ್ಸನ್ನು ಇಲ್ಲಿಯೂ ಪಡೆದುಕೊಂಡರು. ಅವರು ಈ ಕಾರ್ಯಕ್ರಮದ ನಿರೂಪಣೆಗೆ ಬರಲು ಪ್ರಮುಖ ಕಾರಣ ಅವರ ತಂದೆ ರಾಜಕುಮಾರ್ ಅಂತೆ. ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಈ ವಿಚಾರವನ್ನು ಪುನೀತ್ ಹಂಚಿಕೊಂಡಿದ್ದಾರೆ.
ಅಣ್ಣಾವ್ರು ತಪ್ಪದೆ ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡಪತಿ' ಕಾರ್ಯಕ್ರಮ ನೋಡುತ್ತಿದ್ದರಂತೆ. ಅವರ ಜೊತೆ ಪುನೀತ್ ಸಹ ವೀಕ್ಷಿಸುತ್ತಿದ್ದರಂತೆ. 2011ರಲ್ಲಿ ಕೋಟ್ಯಧಿಪತಿ ಮೊದಲ ಸೀಸನ್ ನಡೆಸಿಕೊಡಬೇಕು ಎಂದು ಕೇಳಿದಾಗ ರಾಜಕುಮಾರ್ ಅವರು ಇರಲಿಲ್ಲ. ಆದರೆ, ಅವರ ತಾಯಿ ಪಾರ್ವತಮ್ಮ ಅವರು ಪುನೀತ್ಗೆ ಆತ್ಮವಿಶ್ವಾಸ ತುಂಬಿದ್ದರಂತೆ. ಶಿವಣ್ಣ ಮಾರ್ಗದರ್ಶನ, ರಾಘಣ್ಣ ಸಲಹೆ ಸಹ ಇವರಿಗೆ ದೊರಕಿತಂತೆ. ಇವರೆಲ್ಲರ ಪ್ರೋತ್ಸಾಹದಿಂದ ಕಿರುತೆರೆಗೆ ಕಾಲಿಟ್ಟರಂತೆ ಅಪ್ಪು.