ಕರ್ನಾಟಕ

karnataka

ETV Bharat / sitara

50ರ ಸಂಭ್ರಮದಲ್ಲಿ ನಟಸಾರ್ವಭೌಮ! - undefined

ಈಗ ಕನ್ನಡ ಚಿತ್ರರಂಗಕ್ಕೆ ಸುಭಿಕ್ಷ ಕಾಲ. ವರ್ಷವೊಂದಕ್ಕೆ 250 ಕನ್ನಡ ಚಿತ್ರಗಳು ತಯಾರಾಗುತ್ತಿವೆ. ಆದರೆ, ಚಂದನವನದಲ್ಲಿ ವಾಕ್​ ಚಿತ್ರಯುಗ ಪ್ರಾರಂಭವಾದಾಗಿನಿಂದ 60ರ ದಶಕದ ಕೊನೆಯವರೆಗೆ, ಅಂದರೆ 25 ವರ್ಷಗಳಲ್ಲಿ ಕೇವಲ 102 ಚಿತ್ರಗಳು ತಯಾರಾಗಿದ್ದವು. ಈ ಹಿಂದೆ ಸಾಕಷ್ಟು ಚಿತ್ರಗಳು ಶತದಿನ ಪೂರೈಸುತ್ತಿದ್ದವು. ಆದರೆ, ಈಗ ಇಂತಹ ಸಾಧನೆ ಮಾಡುವ ಚಿತ್ರಗಳ ಸಂಖ್ಯೆ ವಿರಳ.

ನಟಸಾರ್ವಭೌಮ

By

Published : Mar 29, 2019, 12:28 PM IST

ಇತ್ತೀಚೆಗೆ ವಾರಕ್ಕೆ ಆರು, ಒಂಭತ್ತು ಸಿನಿಮಾಗಳು ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಸ್ಟಾರ್ ನಟರ ಚಿತ್ರಗಳು 25, 50, 75 ಹಾಗೂ 100 ದಿನ ಪ್ರದರ್ಶದ ಭಾಗ್ಯ ಕಾಣುವುದು ಕಷ್ಟ. ಅಂತಹುದರಲ್ಲಿ ಪುನೀತ್ ರಾಜಕುಮಾರ್ ನಟಿಸಿರುವ ‘ನಟಸಾರ್ವಭೌಮ’ 50ನೇ ದಿನಕ್ಕೆ ಕಾಲಿಟ್ಟಿದೆ.

ನಟಸಾರ್ವಭೌಮ, ಅಪ್ಪು ಜತೆ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್ ಅವರ ಮೂರನೇ ಹಾಗೂ ನಿರ್ದೇಶಕ ಪವನ್ ಒಡೆಯರ್ ಅವರ ಎರಡನೇ ಕಾಂಬಿನೇಷನ್ ಚಿತ್ರ. 50ನೇ ದಿವಸಕ್ಕೆ ಹಲವಾರು ಮಲ್ಟಿಪ್ಲೆಕ್ಸ್ ಹಾಗೂ ಕೆಲವು ಸಿಂಗಲ್ ಸ್ಕ್ರೀನ್​ಗಳಲ್ಲಿ ‘ನಾಟಸಾರ್ವಭೌಮ’ ಅಮೋಘ ಪ್ರದರ್ಶನ ಕಾಣುತ್ತಿದೆ.

ವೈದಿ ಛಾಯಾಗ್ರಹಣ, ಡಿ ಇಮಾನ್ ಸಂಗೀತ, ಕಾಯ್ಕಿಣಿ, ಯೋಗರಾಜ ಭಟ್​​, ಕವಿರಾಜ್ ಗೀತ ಸಾಹಿತ್ಯದ ಈ ಸಿನಿಮಾದಲ್ಲಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ನಾಯಕಿಯರಾಗಿ ರಚಿತಾ ರಾಮ್, ಅನುಪಮ ಪರಮೇಶ್ವರನ್, ರವಿಶಂಕರ್, ಚಿಕ್ಕಣ್ಣ, ಪ್ರಭಾಕರ್, ಅವಿನಾಶ್, ಸಾಧು ಕೋಕಿಲ, ಶ್ರೀನಿವಾಸಮೂರ್ತಿ, ಅತಿಥಿ ಪಾತ್ರದಲ್ಲಿ ಡಾ! ಬಿ.ಸರೋಜ ದೇವಿ ಹಾಗೂ ಇತರರು ಅಭಿನಯಿಸಿದ್ದಾರೆ.

ಇನ್ನು ಶೀಘ್ರದಲ್ಲೇ ದರ್ಶನ್ ನಟನೆಯ ಯಜಮಾನ ಹಾಗೂ ಬೆಲ್ ಬಾಟಮ್ ಚಿತ್ರಗಳು 50ನೇ ದಿವಸಕ್ಕೆ ಬಂದು ತಲುಪಲಿವೆ.

For All Latest Updates

TAGGED:

ABOUT THE AUTHOR

...view details