ಬಾಲಿವುಡ್ ಚಿತ್ರರಂಗ ಕಂಡ ದಿಗ್ಗಜ ನಟ ದಿಲೀಪ್ ಕುಮಾರ್ ಇಂದು ಕೊನೆಯುಸಿರೆಳೆದಿದ್ದಾರೆ. ಹಿಂದಿ ಸಿನಿಮಾ ರಂಗದಲ್ಲಿ 65ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ನಿಧನಕ್ಕೆ ನಟ ಪುನೀತ್ ರಾಜ್‍ಕುಮಾರ್ ಕಂಬನಿ ಮಿಡಿದಿದ್ದು, ವಿಶೇಷವಾಗಿ ಸ್ಮರಿಸಿದ್ದಾರೆ.
ದಿಲೀಪ್ ಕುಮಾರ್ -ಅಣ್ಣಾವ್ರು ಜೊತೆಗಿರುವ ಫೋಟೋ ಹಂಚಿಕೊಂಡ ಪವರ್ ಸ್ಟಾರ್ - ದಿಲೀಪ್ ಕುಮಾರ್ , ರಾಜ್ ಕುಮಾರ್ ಫೋಟೋ ಹಂಚಿಕೊಂಡ ಪುನೀತ್
ನಟ ಪುನೀತ್ ರಾಜ್‍ಕುಮಾರ್ ಬಾಲಿವುಡ್ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಡಾ. ರಾಜ್‍ಕುಮಾರ್ ಅವರು ದಿಲೀಪ್ ಕುಮಾರ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
![ದಿಲೀಪ್ ಕುಮಾರ್ -ಅಣ್ಣಾವ್ರು ಜೊತೆಗಿರುವ ಫೋಟೋ ಹಂಚಿಕೊಂಡ ಪವರ್ ಸ್ಟಾರ್ ದಿಲೀಪ್ ನಿಧನಕ್ಕೆ ಪುನೀತ್ ಸಂತಾಪ](https://etvbharatimages.akamaized.net/etvbharat/prod-images/768-512-12382447-thumbnail-3x2-bng.jpg)
ತಂದೆ ರಾಜ್ ಕುಮಾರ್ ಜೊತೆ ದಿಲೀಪ್ ಕುಮಾರ್ ಇರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಾನು ಎರಡು ಸಂದರ್ಭಗಳಲ್ಲಿ ನಿಮ್ಮನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಅದು ಅಪ್ಪಾಜಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ ಸಂದರ್ಭ. ಈ ಪ್ರಶಸ್ತಿಯನ್ನು ಅಪ್ಪಾಜಿ ಮತ್ತು ದಿಲೀಪ್ ಸರ್ ಇಬ್ಬರೂ ಪರಸ್ಪರ ಗೌರವ ಹಂಚಿಕೊಂಡ ಸಂತಸದ ವಿಚಾರ ಎಂದು ಸ್ಮರಿಸಿದ್ದಾರೆ.
ಅಪ್ಪಾಜಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುವಾಗ ಅವರನ್ನು ಭೇಟಿಯಾದದ್ದು ನನಗೆ ನೆನಪಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅದ್ಭುತ ಕೊಡುಗೆಯನ್ನು ನೆನಪಿಸಿಕೊಳ್ಳಲಾಗುವುದು ಎಂದು ಪುನೀತ್ ಬಾಲಿವುಡ್ ದಿಗ್ಗಜ ದಿಲೀಪ್ ಕುಮಾರ್ ಅವರ ಬಗ್ಗೆ ಭಾವನಾತ್ಮಕವಾಗಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.