ಕರ್ನಾಟಕ

karnataka

ETV Bharat / sitara

ಚಿತ್ರಮಂದಿರಗಳ ಮುಂದೆ ರಾರಾಜಿದ ಪುನೀತ್​​ : ಬರೋಬ್ಬರಿ 30 ಕಟೌಟ್ಸ್ ನಿಲ್ಲಿಸಿ ದಾಖಲೆ ಬರೆದ ಅಪ್ಪು ಪ್ಯಾನ್ಸ್​ - ಪುನೀತ್​​ ಬಹುನಿರೀಕ್ಷಿತ ಜೇಮ್ಸ್​​ ಸಿನಿಮಾ

ಶಿವಣ್ಣ ಅಭಿಮಾನಿಗಳ ಸಂಘ, ಪುನೀತ್ ಅಭಿಮಾನಿಗಳು, ಅಪ್ಪು ಯೂತ್ ಬಿಗ್ರೇಡ್ ಅಭಿಮಾನಿಗಳು ಮಾಗಡಿ ರಸ್ತೆಯಲ್ಲಿರೋ ವೀರೇಶ್​ ಥಿಯೇಟರ್​ ಮುಂಭಾಗ ಅಪ್ಪು ಅವರ ಬರೋಬ್ಬರಿ 30 ಕಟೌಟ್​ಗಳನ್ನು ಹಾಕುವ ಮೂಲಕ ದಾಖಲೆ ಬರೆದಿದ್ದಾರೆ..

Actor Puneeth Raj Kumar Cutouts in front of cinema theatres
ಚಿತ್ರಮಂದಿರಗಳ ಮುಂದೆ ರಾರಾಜಿದ ಪುನೀತ್ ಕಟೌಟ್ಸ್

By

Published : Mar 12, 2022, 7:06 AM IST

Updated : Mar 12, 2022, 7:36 AM IST

ಪವರ್​ ಸ್ಟಾರ್​ ಪುನೀತ್​​ ರಾಜ್​ ಅಭಿನಯದ ಬಹುನಿರೀಕ್ಷಿತ ಜೇಮ್ಸ್​​ ಸಿನಿಮಾ ಮಾರ್ಚ್​​ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಚಿತ್ರಮಂದಿರಗಳ ಮುಂದೆ ಅಪ್ಪು ಕಟೌಟ್ಸ್​ಗಳನ್ನು ನಿಲ್ಲಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಚಿತ್ರಮಂದಿರಗಳ ಮುಂದೆ ರಾರಾಜಿದ ಪುನೀತ್ ಕಟೌಟ್ಸ್

ಈಗಾಗಲೇ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಕಟೌಟ್​​​ಗಳು​ ತಲೆ ಎತ್ತಿವೆ. ಕಮಾಲನಗರದ ವೀರಭದ್ರೇಶ್ವರ ಥಿಯೇಟರ್ ಮುಂದೆ ಪುನೀತ್ ಕಟೌಟ್ ಜೊತೆ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ಕಟೌಟ್​ಗಳು ರಾರಾಜಿಸುತ್ತಿವೆ. ವಿಶೇಷವಾಗಿ ಜೇಮ್ಸ್​ ಸಿನಿಮಾದ ವಿವಿಧ ಅವತಾರಗಳು ಕಣ್ಮನ ಸೆಳೆಯುತ್ತಿವೆ.

ಶಿವಣ್ಣ ಅಭಿಮಾನಿಗಳ ಸಂಘ, ಪುನೀತ್ ಅಭಿಮಾನಿಗಳು, ಅಪ್ಪು ಯೂತ್ ಬಿಗ್ರೇಡ್ ಅಭಿಮಾನಿಗಳು ಮಾಗಡಿ ರಸ್ತೆಯಲ್ಲಿರೋ ವೀರೇಶ್​ ಥಿಯೇಟರ್​ ಮುಂಭಾಗ ಅಪ್ಪು ಅವರ ಬರೋಬ್ಬರಿ 30 ಕಟೌಟ್​ಗಳನ್ನು ಹಾಕುವ ಮೂಲಕ ದಾಖಲೆ ಬರೆದಿದ್ದಾರೆ.

ಚಿತ್ರಮಂದಿರಗಳ ಮುಂದೆ ರಾರಾಜಿದ ಪುನೀತ್ ಕಟೌಟ್ಸ್

ರಾಜವಂಶದ ಅಭಿಮಾನಿಗಳು, ಪುನೀತ್​ ಅಭಿನಯದ ಅಪ್ಪು ಸಿನಿಮಾದಿಂದ ಹಿಡಿದು ಜೇಮ್ಸ್ ಸಿನಿಮಾವರೆಗೂ ನಟಿಸಿರೋ ಎಲ್ಲಾ ಸಿನಿಮಾದ ಹೆಸರಲ್ಲಿ ಕಟೌಟ್ಸ್​ ನಿಲ್ಲಿಸುವ ಮೂಲಕ ಚಿತ್ರರಂಗದಲ್ಲಿ ರೆಕಾರ್ಡ್ ಮಾಡುತ್ತಿದ್ದಾರೆ.

ಚಿತ್ರಮಂದಿರಗಳ ಮುಂದೆ ರಾರಾಜಿದ ಪುನೀತ್ ಕಟೌಟ್ಸ್

ವೀರೇಶ್ ಚಿತ್ರಮಂದಿರದ ಮುಂಭಾಗ ಕಟೌಟ್ಸ್​​ಗಳನ್ನು ನಿಲ್ಲಿಸುವ ಕೆಲಸ ಭರದಿಂದ ಸಾಗುತ್ತಿದೆ. ಈಗಾಗಲೇ ಅಪ್ಪು, ಅಭಿ, ವೀರ ಕನ್ನಡಿಗ, ಮೌರ್ಯ, ರಾಮ್,ಜಾಕಿ, ಹುಡುಗರು, ಅಣ್ಣಾಬಾಂಡ್, ಯಾರೇ ಕೂಗಾಡಲಿ, ನಿನ್ನಿಂದಲೇ, ಹೀಗೆ ಪವರ್ ಸ್ಟಾರ್ ಅಭಿನಯದ ಎಲ್ಲಾ ಚಿತ್ರಗಳ ಕಟೌಟ್ಸ್​​​ ಚಿತ್ರಮಂದಿರದ ಮುಂದೆ ರಾರಾಜಿಸುತ್ತಿವೆ. ಈ ಎಲ್ಲಾ ಖರ್ಚು ವೆಚ್ಚವನ್ನು ಪುನೀತ್ ಅಭಿಮಾನಿ ಆನಂದ್ ಹಾಗೂ ರಾಜವಂಶದ ಅಭಿಮಾನಿಗಳು ವಹಿಸಿಕೊಂಡಿದ್ದಾರೆ.

ಇನ್ನು ಜೇಮ್ಸ್​ ಬಿಡುಗಡೆ ದಿನ ಅಪ್ಪು ಕಟೌಟ್ಸ್​ಗಳಿಗೆ ಹೆಲಿಕ್ಯಾಪ್ಟರ್​ ಮೂಲಕ ಹೂ ಮಳೆ ಸುರಿಸಲು ರಾಜವಂಶದ ಅಭಿಮಾನಿಗಳು ತೀರ್ಮಾನಿಸಿದ್ದಾರೆ. ಅಗಲಿದ ದೊಡ್ಮನೆ ಕುಡಿಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ.

Last Updated : Mar 12, 2022, 7:36 AM IST

ABOUT THE AUTHOR

...view details