ದ್ವಿತೀಯ ಪಿಯುಸಿಯಲ್ಲಿ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಪುತ್ರಿ ಅಮೃತಾ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೇಕಡಾ 91% ಅಂಕಗಳನ್ನು ಬಾಚಿಕೊಳ್ಳುವ ಮೂಲಕ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.
ದ್ವಿತೀಯ ಪಿಯು ಫಲಿತಾಂಶ....ಅಪ್ಪನ ಕನಸು ನನಸು ಮಾಡಿದ ಪ್ರೇಮ್ ಪುತ್ರಿ - undefined
ನಟ ಪ್ರೇಮ್ ಪುತ್ರಿ ಅಮೃತಾ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೇಕಡಾ 91% ಅಂಕ ಗಳಿಸಿ ಅಪ್ಪನ ಕೀರ್ತಿ ಹೆಚ್ಚಿಸಿದ್ದಾರೆ.
ಚಿತ್ರಕೃಪೆ : ಟ್ವಿಟ್ಟರ್
ಇಂದು ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಪ್ರೇಮ್ ಪುತ್ರಿ ಅಮೃತಾ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ತಂದೆ - ತಾಯಿಯ ಕೀರ್ತಿ ಹೆಚ್ಚಿಸಿದ್ದಾರೆ. ಅಮೃತಾ 'ಎಸ್ಎಸ್ಎಲ್ಸಿ'ಯಲ್ಲೂ ಅತ್ಯುತ್ತಮ ಅಂಕ ಗಳಿಸಿದ್ದರು. ಇದೀಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.91ರಷ್ಟು ಅಂಕಗಳಿಸಿ ಗಮನ ಸೆಳೆದಿದ್ದಾರೆ. ಈ ಖುಷಿಯನ್ನು ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.