ಕರ್ನಾಟಕ

karnataka

ETV Bharat / sitara

ಸಲ್ವಾರ್ ಸೀರೆ, ಕಿವಿಯಲ್ಲಿ ಜುಮುಕಿ: ಟ್ರೆಡಿಷನ್​​​ ಲುಕ್​​ನಲ್ಲಿ ಮಿಂಚುತ್ತಿರುವ ಲವ್ಲಿ ಸ್ಟಾರ್​​ ಪುತ್ರಿ - ಟ್ರೆಡಿಷನ್​​​ ಲುಕ್​​ನಲ್ಲಿ ಮಿಂಚುತ್ತಿರುವ ಪ್ರೇಮ್​ ಪುತ್ರಿ ಅಮೃತಾ

ಸ್ಯಾಂಡಲ್​ವುಡ್​ ನಟ ಪ್ರೇಮ್​ ಅವರ ಮಗಳು ಅಮೃತಾ ಸಲ್ವಾರ್ ಸೀರೆ ಉಟ್ಟು, ಜುಮುಕಿ ತೊಟ್ಟು ಕಲರ್ ಫುಲ್ ಫೋಟೋಶೂಟ್ ಮಾಡಿಸಿದ್ದಾರೆ‌.

Amrita Color Full Photoshoot
ಟ್ರಡಿಷನ್​​​ ಲುಕ್​​ನಲ್ಲಿ ಮಿಂಚುತ್ತಿರುವ ಈ ಬೆಡಗಿ ಕನ್ನಡದ ಸ್ಟಾರ್​​ ನಟನ ಮಗಳು

By

Published : Oct 14, 2020, 12:58 PM IST

ಸ್ಯಾಂಡಲ್​​​ವುಡ್​​​ನಲ್ಲಿ ಸ್ಟಾರ್ ಮಕ್ಕಳು ಒಬ್ಬರಿಗಿಂತ ಒಬ್ಬರು ಟ್ಯಾಲೆಂಟ್‌ ಇರುವ ಸ್ಟಾರ್ ಕಿಡ್​​​ಗಳಿದ್ದಾರೆ‌. ಅದರಲ್ಲಿ ಕೆಲ ಸ್ಟಾರ್​ಗಳ ಮಕ್ಕಳಂತು ಫ್ಯೂಚರ್ ನಟ, ನಟಿಯರಾಗುವ ಸುಳಿವನ್ನ ನೀಡಿದ್ದಾರೆ. ಇದೀಗ ಲವ್ಲೀ ಸ್ಟಾರ್ ಪ್ರೇಮ್ ಮನೆಯಲ್ಲಿ ಮೂರು ಜನ ಸಿನಿಮಾ ಸೆಲೆಬ್ರಿಟಿಗಳು ಇದ್ದಾರೆ. ಹಾಗದ್ರೆ ಪ್ರೇಮ್ ಜೊತೆಗೆ ಇನ್ನಿಬ್ಬರು ಯಾರು ಸೆಲೆಬ್ರಿಟಿಗಳು ಅಂದ್ರಾ? ಪ್ರೇಮ್​​​ ಮಗ ಏಕಾಂತ್ ಹಾಗು ಮಗಳು ಅಮೃತಾ.

ಅಮೃತಾ
ಟ್ರೆಡಿಷನಲ್​ ಲುಕ್​ನಲ್ಲಿ ಅಮೃತಾ

ಹೌದು, ಈಗಾಗಲೇ ಪ್ರೇಮ್ ಮಗ ಏಕಾಂತ್ ಬಾಲ ನಟನಾಗಿ ಗಮನ ಸೆಳೆದಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರೇಮ್ ಮುದ್ದಿನ ಮಗಳು ಅಮೃತಾ ಸಿನಿಮಾಗೆ ಬರುವ ಸೂಚನೆ ನೀಡಿದ್ದಾರೆ‌. ಈ ಮಾತಿಗೆ ಪೂರಕವಾಗಿ ಅಮೃತಾ ಸಲ್ವಾರ್ ಸೀರೆ ಉಟ್ಟು, ಜುಮುಕಿ ತೊಟ್ಟು ಕಲರ್ ಫುಲ್ ಫೋಟೋಶೂಟ್ ಮಾಡಿಸಿದ್ದಾರೆ‌. ಅಮೃತಾ ಕ್ಯಾಮಾರಾಗೆ ಕೊಟ್ಟಿರುವ ಪೋಸ್​​​ಗಳನ್ನ ನೋಡ್ತಾ ಇದ್ದಾರೆ ಪ್ರೇಮ್ ಮಗಳು ಇವ್ರೆನಾ ಎಂಬ ಆಶ್ಚರ್ಯ ಆಗುತ್ತೆ‌.

ಅಮೃತಾ
ಅಮೃತಾ

ನೆನಪಿರಲಿ ಪ್ರೇಮ್ ಮಗಳ ಫೋಟೋ ಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದ್ಧೂರಿಯಾದ ಸಲ್ವಾರ್ ಸೀರೆಯಲ್ಲಿ ಅಮೃತಾನನ್ನ ನೋಡಿದ ಪ್ರೇಮ್, ಮಗಳನ್ನ ದೇವತೆಗೆ ಹೋಲಿಸಿದ್ದಾರೆ‌. ಮಗಳೆಂದರೆ ತಂದೆಗೆ ದೇವತೆಯಂತೆ. ದೇವತೆಯನ್ನು ಪಡೆಯುವ ಅದೃಷ್ಟ ಎಲ್ಲಾ ತಂದೆಯರಿಗೂ ಸಿಗುವುದಿಲ್ಲ. ಅಭಿನಂದನೆಗಳು ನನ್ನ ಅದೃಷ್ಟದ ದೇವತೆಗೆ' ಎಂದು ನೆನಪಿರಲಿ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಮಗಳ ಫೋಟೋ ಹಂಚಿಕೊಂಡು ಕ್ಯಾಪ್ಶನ್ ನೀಡಿದ್ದಾರೆ.

ಪ್ರೇಮ್​​ ಮತ್ತು ಅಮೃತಾ

ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ 90%ಕ್ಕಿಂತ ಹೆಚ್ಚು ಅಂಕ ಗಳಿಸಿ ಅಪ್ಪನ ಮುದ್ದಿನ ಮಗಳು ಅಂತಾ ಕರೆಯಿಸಿಕೊಂಡಿದ್ರು ಅಮೃತಾ. ಅಷ್ಟೇ ಅಲ್ಲಾ, ಅಮೃತಾಳ 18ನೇ ಹುಟ್ಟುಹಬ್ಬವನ್ನು ನಟ ಪ್ರೇಮ್‌ ಗಿಟಾರ್ ನುಡಿಸುವ ಮೂಲಕ ವಿಶೇಷವಾಗಿ ಆಚರಿಸಿದ್ದನ್ನು ಸ್ಮರಿಸಬಹುದು.

ಸದ್ಯ ಅಮೃತಾ ಇಂಜಿನಿಯರಿಂಗ್ ಓದುತ್ತಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ಇಂಡಸ್ಟ್ರಿಗೆ ಬಂದರು ಅಚ್ಚರಿಯಿಲ್ಲಾ.

ಪ್ರೇಮ್​​ ಫ್ಯಾಮಿಲಿ
ಪ್ರೇಮ್​​ ಮತ್ತು ಅಮೃತಾ

ABOUT THE AUTHOR

...view details