ಕಳೆದೆರಡು ದಿನಗಳಿಂದ 'ಬಾಟಲ್ ಕಾಪ್ ಚಾಲೆಂಜ್' ಭಾರೀ ಸದ್ದು ಮಾಡ್ತಿದೆ. ಕಾಲಿನಿಂದ ಒದ್ದು ಬಾಟಲ್ ಕ್ಯಾಪ್ ಓಪನ್ ಮಾಡುವ ವಿಡಿಯೋಗಳ ಗೊಂಚಲು ಕಣ್ಣಿಗೆ ರಾಚುತ್ತಿವೆ. ಫಿಟ್ನೆಸ್ ಭಾಗವಾಗಿ ನಡೆಯುತ್ತಿರುವ ಈ ಸವಾಲಿಗೆ ಬಿಗ್ಬಾಸ್ ಪ್ರಥಮ್ ಪಂಚ್ ಕೊಟ್ಟಿದ್ದಾರೆ. ಇಂದು ತಮ್ಮ ಫೇಸ್ಬುಕ್ನಲ್ಲಿ ಬಾಟಲ್ ಮುಚ್ಚಳ ಹೇಗೆ ತೆರೆಯಬೇಕೆಂದು ತೋರಿಸಿರುವ ಅವರು, ಕೈಗಳಿಂದ ಮುಚ್ಚಳ ತೆರೆದು ನೀರು ಕುಡಿಯುವುದು ಒಂದು ಪದ್ಧತಿ. ಅದನ್ನು ಬಿಟ್ಟು ಕುಡಿಯೋದನ್ನು ಕಾಲಿನಲ್ಲಿ ಒದ್ರೆ ಒಳ್ಳೆಯದಾಗುತ್ತಾ? ಇದು ತಪ್ಪು ಎಂದಿದ್ದಾರೆ.
'ಓಪನ್ ಚಾಲೆಂಜ್'ಗೆ ಪ್ರಥಮ್ ಪಂಚ್...ಕ್ಯಾಪ್ ತೆರೆಯೋದು ಕಲಿಸಿಕೊಟ್ಟ ಒಳ್ಳೆಯ ಹುಡುಗ - ಪ್ರಥಮ್
ಈಗ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿರುವ 'ಬಾಟಲ್ ಕಾಪ್ ಚಾಲೆಂಜ್' ವಿರುದ್ಧ ನಟ ಪ್ರಥಮ್ ಸಿಡಿದಿದ್ದಾರೆ. ಕೆಲಸಕ್ಕೆ ಬಾರದ ಈ ತುಕಾಲಿ ಚಾಲೆಂಜ್ ಹಿಂದೆ ಓಡಬೇಡಿ ಎಂದು ಎಲ್ಲರಲ್ಲೂ ಭಿನ್ನವಿಸಿಕೊಂಡಿದ್ದಾರೆ.
ನೀವು ಫಿಟ್ ಆಗಿರಲು ಇಂತಹ ಚಾಲೆಂಜ್ಗಳ ಮೊರೆ ಹೋಗುವ ಬದಲು ಯೋಗ ಮಾಡಿ. ಇದರಿಂದ ರೋಗ ದೂರವಾಗುವುದು ಎಂದು ಕಿವಿ ಮಾತು ಹೇಳಿದ್ದಾರೆ. ನನ್ನ ಮಾತು ಕೇಳಿ.ಇದನ್ನ ಜೀವನದಲ್ಲಿ ಪ್ರಾಕ್ಟಿಸ್ ಮಾಡಿ, ಉದ್ಧಾರ ಆಗೆ ಆಗ್ತೀರ. ನಾನ್ ಹೇಳೊದು ನಿಮ್ಮ ಒಳ್ಳಯದಕ್ಕೆ! #Isupportyoga not ಕೆಲಸಕ್ಕೆ ಬಾರದ ತುಕಾಲಿ ಚಾಲೆಂಜ್. ಇಂತ ಚಾಲೆಂಜ್ ಹುಟ್ಟಿಹಾಕಿರುವ ಹಿಂದಿ ಸ್ಟಾರ್ಗೆ ಮೊದ್ಲು ತಲೆಮೇಲೆ ಹೊಡಿಬೇಕು ಎಂದಿದ್ದಾರೆ ಒಳ್ಳೆಯ ಹುಡ್ಗ ಪ್ರಥಮ್.
ಇನ್ನು ಈಗಾಗಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್, ಹಾಲಿವುಡ್ ನಟರು, ಸ್ಯಾಂಡಲ್ವುಡ್ನ ಕೆಲ ನಟ-ನಟಿಯರು ಈ ಚಾಲೆಂಜ್ ಮಾಡಿದ್ದಾರೆ.