ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಭೂಲೋಕದ ಸ್ವರ್ಗದಂತಿರುವ ಕಾಶ್ಮೀರಕ್ಕೆ ಹಾರಿರುವ ರೈ, ಅಲ್ಲಿಯ ಪ್ರೇಕ್ಷಣಿಯ ಸ್ಥಳಗಳಲ್ಲಿ ಸುತ್ತಾಡಿದ್ದಾರೆ. ಈ ಕ್ಷಣಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಅವರು, ನನ್ನ ಸುಂದರವಾದ ದೇಶದಲ್ಲಿ, ನನ್ನಅದ್ಭುತ ಕುಟುಂಬದೊಂದಿಗೆ ಸಮ್ಮರ್ ವೆಕೇಷನ್ ಎಂದು ಬರೆದುಕೊಂಡಿದ್ದಾರೆ.
ಕಾಶ್ಮೀರಿಗಳು ಗೌರವಯುತ ಜೀವನಕ್ಕೆ ಹಂಬಲಿಸುತ್ತಿದ್ದಾರೆ : ನಟ ಪ್ರಕಾಶ್ ರೈ - ಸಮವಸ್ತ್ರ
ಲೋಕಸಭೆ ಚುನಾವಣೆ ಸೋಲಿನ ಬಳಿಕ ನಟ ಪ್ರಕಾಶ್ ರೈ ಸದ್ಯ ರಿಲಾಕ್ಸ್ ಮೂಡಿಗೆ ಜಾರಿದ್ದಾರೆ. ತಮ್ಮ ಫ್ಯಾಮಿಲಿ ಜತೆ ಜಾಲಿ ರೈಡ್ಗೆ ಹಾರಿದ್ದಾರೆ.
ಪ್ರಕಾಶ್ ರೈ
ಕಾಶ್ಮೀರದಲ್ಲಿ ಪ್ರವಾಸದ ಜತೆಗೆ ಶೂಟಿಂಗ್ಲ್ಲೂ ಭಾಗವಹಿಸಿರುವ ಅವರು, ಒಂದು ದಿನ ಬಿಡುವು ಪಡೆದು ಅಲ್ಲಿಯ ಸ್ಥಳೀಯರ, ಮಾಧ್ಯಮಗಳ ಜತೆ ಸಂವಾದ ನಡೆಸಿದ್ದಾರೆ. ಈ ಬಗ್ಗೆಯೂ ಟ್ವಿಟ್ಟರ್ನಲ್ಲಿ ಪ್ರಸ್ತಾಪಿಸಿರುವ ರೈ, ಕಾಶ್ಮೀರಿಗಳು ಗೌರವಯುತ ಜೀವನಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇನ್ನು 17 ನೇ ಲೋಕಸಭೆ ಚುನಾವಣೆಗೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ರೈ ಸೋಲು ಕಂಡಿದ್ದರು. ಚುನಾವಣೆ ನಂತರ ಇದೀಗ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.