ಕರ್ನಾಟಕ

karnataka

ETV Bharat / sitara

ಖಡಕ್ ವಿಲನ್ ಆಗಿ ಕಿರುತೆರೆಗೆ ಕಂ ಬ್ಯಾಕ್ ಆದ ಪವನ್ ಕುಮಾರ್ - ಗಟ್ಟಿಮೇಳ ಧಾರವಾಹಿ

ಕಿನ್ನರಿಯ ನಕುಲ್ ಆಲಿಯಾಸ್ ಶಿವಂ ಆಗಿ ಬದಲಾದ ಪವನ್ ಕುಮಾರ್ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿಯಲ್ಲಿ ಪತ್ರಕರ್ತ ಬಾಲಾಜಿ ಆಗಿ ನಟಿಸಿದರು‌. ಆಕೃತಿ ಧಾರಾವಾಹಿ ಮುಗಿದ ಬಳಿಕ ಕೊಂಚ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿರುವ ಪವನ್ ಕುಮಾರ್ ಇದೀಗ ವಿಲನ್ ಆಗಿ ಕಂ ಬ್ಯಾಕ್ ಆಗಿದ್ದಾರೆ..

pawan
pawan

By

Published : May 8, 2021, 5:06 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯಲ್ಲಿ ನಕುಲ್ ಆಲಿಯಾಸ್ ಶಿವಂ ಆಗಿ ನಟಿಸುತ್ತಿದ್ದ ಪವನ್ ಕುಮಾರ್ ಇದೀಗ ಖಡಕ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ.

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಈಗಾಗಲೇ ಎರಡು ಹೊಸ ಪಾತ್ರಗಳ ಎಂಟ್ರಿಯಾಗಿದೆ. ಅದರಲ್ಲಿ ಪವನ್ ಕುಮಾರ್ ಕೂಡ ಒಬ್ಬರು! ಖಳನಾಯಕನಾಗಿ ಗಟ್ಟಿಮೇಳ ಧಾರಾವಾಹಿಗೆ ಎಂಟ್ರಿ ಕೊಟ್ಟಿರುವ ಪವನ್ ಕುಮಾರ್ ಅವರ ಹೊಸ ಅವತಾರ ಪ್ರೇಕ್ಷಕರಿಗೆ ಇಷ್ಟವಾಗಿದೆ.

ಕಂಪ್ಯೂಟರ್ ಸೈನ್ಸ್​ನಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಪವನ್ ಕುಮಾರ್​ಗೆ ಮೊದಲಿನಿಂದಲೂ ನಟನಾಗಬೇಕು, ಬಣ್ಣದ ನಂಟು ಬೆಳೆಸಿಕೊಳ್ಳಬೇಕು ಎಂಬ ಮಹಾದಾಸೆ ಇತ್ತು.

ಪದವಿಯ ನಂತರ ನಟನಾ ಲೋಕದತ್ತ ಮುಖ ಮಾಡಿದ ಪವನ್ ಕುಮಾರ್, ನಟನೆಯ ರೀತಿ ನೀತಿಗಳನ್ನು, ಆಗು ಹೋಗುಗಳನ್ನು ತಿಳಿಯಲು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸೇರಿದರು.

ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ ಅಲ್ಲಿದ್ದ ಪವನ್ ಕುಮಾರ್ ನಟನೆಯ ಪ್ರಕಾರಗಳನ್ನು ತಿಳಿದರು. ಮಾದಕ ಎನ್ನುವ ಕಿರುಚಿತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಪವನ್ ಕುಮಾರ್, ಮುಂದೆ ಕಿರುತೆರೆಯತ್ತ ಮುಖ ಮಾಡಿದರು.

ಪತ್ತೇದಾರಿ ಪ್ರತಿಭಾ, ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಪವನ್ ಕುಮಾರ್ ಮತ್ತೆ ಆಯ್ಕೆಯಾಗಿದ್ದು ಮಾಹಾಕಾಳಿಯ ಇಂದ್ರನ ಪಾತ್ರಕ್ಕೆ.

ಪೌರಾಣಿಕ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಕಾರಣ ಸಹಜವಾಗಿ ಸಂತಸದಲ್ಲಿದ್ದ ಪವನ್ ಕುಮಾರ್, ಶೂಟಿಂಗ್‌ಗಾಗಿ ಮುಂಬೈಗೆ ಹೋದಾಗ ಆಘಾತವಾಗಿತ್ತು. ಯಾಕೆಂದರೆ, ಆ ಪಾತ್ರಕ್ಕೆ ಬೇರೆಯವರು ಆಯ್ಕೆಯಾಗಿದ್ದರು.

ಆಶ್ಚರ್ಯ ಎಂದರೆ ಪವನ್ ಅವರಿಗೆ ಅದೇ ಧಾರಾವಾಹಿಯಲ್ಲಿ ಚಂದ್ರನಾಗಿ ಹೊಳೆಯುವ ಅವಕಾಶ ದೊರಕಿತು. ಬಂದ ಅವಕಾಶ ಬೇಡ ಎನ್ನದೇ ನಟಿಸಿದರು. ತದ ನಂತರ ಜೈ ಹನುಮಾನ್ ಎನ್ನುವ ಪೌರಾಣಿಕ ಧಾರಾವಾಹಿಯಲ್ಲಿ ರಾಜ ಸತ್ಯವ್ರತ ಆಗಿ ಅಭಿನಯಿಸಿದ ಪವನ್ ಕುಮಾರ್ ಕಿನ್ನರಿಯ ನಕುಲ್ ಆಗಿ ಬದಲಾದರು.

ಕಿನ್ನರಿಯ ನಕುಲ್ ಆಲಿಯಾಸ್ ಶಿವಂ ಆಗಿ ಬದಲಾದ ಪವನ್ ಕುಮಾರ್ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿಯಲ್ಲಿ ಪತ್ರಕರ್ತ ಬಾಲಾಜಿ ಆಗಿ ನಟಿಸಿದರು‌. ಆಕೃತಿ ಧಾರಾವಾಹಿ ಮುಗಿದ ಬಳಿಕ ಕೊಂಚ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿರುವ ಪವನ್ ಕುಮಾರ್ ಇದೀಗ ವಿಲನ್ ಆಗಿ ಕಂ ಬ್ಯಾಕ್ ಆಗಿದ್ದಾರೆ.

ABOUT THE AUTHOR

...view details