ಕರ್ನಾಟಕ

karnataka

ETV Bharat / sitara

ನಿರಂಜನ್ 'ಹಂಟರ್' ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್ - ರಿಯಲ್ ಸ್ಟಾರ್ ಉಪೇಂದ್ರರವರ ಅಣ್ಣನ‌ ಮಗ ನಿರಂಜನ್

ನಮ್ಮ ಹುಡುಗರು, ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಿರಂಜನ್‌ 'ಹಂಟರ್'​ ಎಂಬ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ರಿಯಲ್​ ಸ್ಟಾರ್​ ಉಪೇಂದ್ರ-ಪ್ರಿಯಾಂಕಾ ದಂಪತಿ ಬಿಡುಗಡೆಗೊಳಿಸಿ ಶುಭ ಕೋರಿದ್ದಾರೆ.

Actor Niranjan will act a new movies Hantar
ಹಂಟರ್ ಸಿನಿಮಾಗೆ ಉಪೇಂದ್ರ ಸಾಥ್​

By

Published : Aug 23, 2021, 5:36 PM IST

ಸೆಕೆಂಡ್ ಆಫ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ‌ ಮಗ ನಿರಂಜನ್ ಸುಧೀಂದ್ರ, ಇದೀಗ ಹಂಟರ್ ಎಂಬ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ.

ನಮ್ಮ ಹುಡುಗರು, ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಿರಂಜನ್‌ ಹಂಟರ್​ ಎಂಬ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೆಲ‌ ದಿನಗಳ ಹಿಂದೆ ನಿರಂಜನ್ ಹುಟ್ಟುಹಬ್ಬಕ್ಕೆ ಹಂಟರ್ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ಉಪೇಂದ್ರ-ಪ್ರಿಯಾಂಕಾ ದಂಪತಿ ಅನಾವರಣಗೊಳಿಸಿ ಶುಭ ಕೋರಿದ್ದರು.

ನಿರಂಜನ್​ ಮತ್ತು ಚಂದನ್​ ಶೆಟ್ಟಿ

ಇದೊಂದು ಆ್ಯಕ್ಷನ್, ಥ್ರಿಲ್ಲರ್ ಕಥಾ ಹಂದರವನ್ನು ಹಂಟರ್ ಸಿನಿಮಾ ಒಳಗೊಂಡಿದ್ದು, ಮಲಯಾಳಂ ನಟಿ ಸೌಮ್ಯ ಮೆನನ್ ನಿರಂಜನ್​ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೀಜರ್ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಕೃಷ್ಣ ಹಂಟರ್​​ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಸೆಪ್ಟೆಂಬರ್ ಅಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ.

ನಿರಂಜನ್ 'ಹಂಟರ್' ಸಿನಿಮಾ

ತ್ರಿವಿಕ್ರಮ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ.

ಓದಿ: ಶವವಾಗಿ ಪತ್ತೆಯಾದ 24 ವರ್ಷದ ನಟಿ.. ಇದು ಆತ್ಮಹತ್ಯೆಯೋ? ಕೊಲೆಯೋ?

ABOUT THE AUTHOR

...view details