ಕನ್ನಡ ಚಿತ್ರರಂಗದ ಸ್ಟಾರ್ ನಟರು ನಟನೆ ಜತೆಗೆ ಸ್ವಂತ ಪ್ರೊಡಕ್ಷನ್ ಹೌಸ್ ತೆರೆಯುತ್ತಿದ್ದಾರೆ. ಈಗಾಗಲೇ ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್, ದರ್ಶನ್, ಸುದೀಪ್ ಹಾಗೂ ಗಣೇಶ್ ತಮ್ಮದೇಯಾದ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ನಟ ಅಪ್ಪು 'ಪಿಆರ್ಕೆ' ಹೆಸರಿನಲ್ಲಿ 'ಆಡಿಯೋ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ. ಇನ್ನು ಯುಗಾದಿಯಂದು ಸುದೀಪ್ ದಂಪತಿಯಿಂದ ಹೊಸ ಯುಟ್ಯೂಬ್ ಚಾನಲ್ ಕೂಡ ಲಾಂಚ್ ಆಯಿತು. ಇದೀಗ ಈ ಸಾಲಿಗೆ ವಿಭಿನ್ನ ಕ್ಯಾರೆಕ್ಟರ್, ಮ್ಯಾನರಿಸಂನಿಂದಲೇ ಕನ್ನಡಿಗರ ಮನ ಗೆದ್ದಿರುವ ನಟ ಸತೀಶ್ ನೀನಾಸಂ ಸೇರಿದ್ದಾರೆ.
ಹೌದು, ಈಗ ಸತೀಶ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು 'ಸತೀಶ್ ಆಡಿಯೋ ಹೌಸ್' ಅನ್ನೋ ಹೊಸ ಯೂಟ್ಯೂಬ್ ಚಾನಲ್ ಶುರು ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಂಡಿರುವ ಅವರು, 'ಸತೀಶ್ ಆಡಿಯೋ ಹೌಸ್' ಇದೊಂದು ಅತ್ಯುತ್ತಮ ಲೈಬ್ರರಿ ಆಗಬಹುದು ಎಂಬ ನಿರೀಕ್ಷೆಯೊಂದಿಗೆ ಪ್ರಾರಂಭಿಸಿದ್ದೇವೆ. ಸಬ್ಸ್ಕ್ರೈಬ್ ಮಾಡಿ. ಶ್ರೀಘ್ರದಲ್ಲೇ ನಮ್ಮ ಮೊದಲ ಕಿರುಚಿತ್ರವಾಗಿ 'ಕಾಜಿ ಅಪ್ಲೋಡ್' ಆಗಲಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರೂ ಶೇರ್ ಮಾಡಿ ಅಂತಾ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಇನ್ನು ಸತೀಶ್ , 2014 ರಲ್ಲಿ 'ಮೀಡಿಯಾ ಹೌಸ್' ಹೆಸರಿನ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿದ್ರು. ಈ ಬ್ಯಾನರ್ನಡಿಯಲ್ಲಿ ಚೊಚ್ಚಲ ಚಿತ್ರವಾಗಿ ‘ರಾಕೆಟ್’ ಒಳ್ಳೆಯ ಯಶಸ್ಸು ಗಳಿಸಿತ್ತು. ಇದೀಗ ಯುಟ್ಯೂಬ್ ಚಾನಲ್ ಶುರುವಾಗಿದ್ದು ಸತೀಶ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.