ಸತೀಶ್, ಜನ್ಮದಿನದ ಉಡುಗೊರೆಯಾಗಿ ಅಭಿಮಾನಿಗಳಿಗೆ 100 ಸಸಿಗಳನ್ನು ನೀಡಿ ಪರಿಸರ ಕಾಳಜಿ ಮೆರೆದರು. ಇದರ ಜತೆಗೆ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಅವರು, ಇಂದು ರಾತ್ರಿ ಹಾಗೂ ನಾಳೆ ಬೆಂಗಳೂರಿನಲ್ಲಿರುವ ಬೀದಿ ನಾಯಿಗಳಿಗೆ ಹೊಟ್ಟೆತುಂಬಾ ಊಟ ಹಾಕಲಿದ್ದಾರೆ. ಈ ಬಗ್ಗೆ ಮಾತಾಡಿರುವ ಸತೀಶ್, ನಾವು ಮನೆಗಳಲ್ಲಿ ಫಾರಿನ್ ಬ್ರೀಡ್ಗಳ ನಾಯಿಗಳನ್ನು ಸಾಕುತ್ತೇವೆ. ಆದರೆ, ಬೀದಿನಾಯಿಗಳು ಹೊಟ್ಟೆಗಿಲ್ಲದೇ ಸಾಯುತ್ತಿವೆ. ಅವುಗಳಿಗೆ ಊಟ ಹಾಕುವ ಕೆಲಸ ಮಾಡುತ್ತೇನೆ ಎಂದರು.
ಬೀದಿನಾಯಿಗಳ ಹೊಟ್ಟೆ ತುಂಬಿಸಲು ಹೊರಟ ನಟ ಸತೀಶ್ ! - undefined
ಸ್ಯಾಂಡಲ್ವುಡ್ ಬ್ರಹ್ಮಚಾರಿ ನಟ ಸತೀಶ್ ನೀನಾಸಂ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34 ನೇ ವಸಂತಕ್ಕೆ ಕಾಲಿಟ್ಟ ಅವರು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸರಳವಾಗಿ ಜನ್ಮದಿನ ಆಚರಿಸಿಕೊಂಡ್ರು.
![ಬೀದಿನಾಯಿಗಳ ಹೊಟ್ಟೆ ತುಂಬಿಸಲು ಹೊರಟ ನಟ ಸತೀಶ್ !](https://etvbharatimages.akamaized.net/etvbharat/prod-images/768-512-3617006-thumbnail-3x2-darshan.jpg)
ನಟ ಸತೀಶ
ಹುಟ್ಟುಹಬ್ಬ ಆಚರಿಸಿಕೊಂಡ ನಟ ಸತೀಶ್
ಸತೀಶ್ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಅವರು ನಟಿಸುತ್ತಿರುವ ಬ್ರಹ್ಮಚಾರಿ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಒಂದೂವರೆ ನಿಮಿಷದ ಈ ಟೀಸರ್ ಸಖತ್ ಆಗಿ ಮೂಡಿ ಬಂದಿದೆ.