ಸ್ಯಾಂಡಲ್ವುಡ್ನ ಡ್ರಗ್ಸ್ ದಂಧೆ ಬಗ್ಗೆ ನಟ ಹಾಗೂ ಸಂಭಾಷಣೆಕಾರ ನವೀನ್ ಕೃಷ್ಣ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ನಟ ನವೀನ್ ಕೃಷ್ಣ ಟ್ವೀಟ್ - ನಟ ನವೀನ್ ಕೃಷ್ಣ
ಸ್ಯಾಂಡಲ್ವುಡ್ನಲ್ಲಿ ಮಜಾ ಮಾಡಲು ಹಣವಿರುವ ಶ್ರೀಮಂತರು ಒಂದೆಡೆಯಿದ್ದರೆ, ದುಡಿದು ಬದುಕಲು ಪರದಾಡುವ ಬಡವರೂ ಇದ್ದಾರೆ ಎಂದು ನಟ ನವೀನ್ ಕೃಷ್ಣ ಟ್ವೀಟ್ ಮಾಡಿದ್ದಾರೆ.
ಸ್ಯಾಂಡಲ್ವುಡ್ನ ಡ್ರಗ್ಸ್ ಮಾಫಿಯಾ ಬಗ್ಗೆ ನಟ ನವೀನ್ ಕೃಷ್ಣ ಟ್ವೀಟ್
ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಕಲಾವಿದರು ಮಾತ್ರವಲ್ಲ, ಲಕ್ಷಾಂತರ ಮಂದಿ ಕಲಾವಿದರು, ತಂತ್ರಜ್ಞರು ಕೂಡ ಇದ್ದಾರೆ. ಮಜಾ ಮಾಡಲು ಹಣವಿರುವ ಶ್ರೀಮಂತರು ಒಂದೆಡೆಯಿದ್ರೆ, ದುಡಿದು ಬದುಕಲು ಪರದಾಡುವ ಬಡವರೂ ಇದ್ದಾರೆ. ಆದರೆ, ಎಲ್ಲರೂ ಸ್ಯಾಂಡಲ್ವುಡ್ನ ಭಾಗವೇ ಆಗಿದ್ದಾರೆ ಎಂದಿದ್ದಾರೆ.
ನನ್ನ ಉದ್ದೇಶ ಒಂದೇ, ಯಾರು ಈ ಮಾಫಿಯಾದಲ್ಲಿ ಸೇರಿಕೊಂಡಿದ್ದಾರೋ ಅವರ ಹೆಸರುಗಳನ್ನು ಹೇಳಿ. ಅವರನ್ನು ಮಾತ್ರ ಆರೋಪಿತರನ್ನಾಗಿಸಿ ಎಂದಿದ್ದಾರೆ.