ಸ್ಟಾರ್ ನಟರು ಮತ್ತು ಅವರ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ನೂರಾರು ಕನಸು ಹೊತ್ತು ಬಂದಿರುವ ಹೊಸ ನಟ-ನಟಿಯರು ಕೂಡ ಆಹಾರ ಪದಾರ್ಥಗಳ ಕಿಟ್ ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬಡವರ ತುತ್ತಿನ ಚೀಲ ತುಂಬಿದ 'ಪ್ರೀತಿಯ ರಾಯಭಾರಿ' ನಕುಲ್ ಗೌಡ.. - food kit to poor people
ನಕುಲ್‌ಗೌಡ ರಾಜಾಜಿನಗರದ 6ನೇ ಬ್ಲಾಕ್ನಲ್ಲಿ ಸುಮಾರು 300ಕ್ಕೂ ಅಧಿಕ ಬಡ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ತರಕಾರಿಗಳನ್ನು ವಿತರಣೆ ಮಾಡುವ ಮೂಲಕ ಬಡವರ ನೆರವಿಗೆ ನಿಂತಿದ್ದಾರೆ.
ನಕುಲ್ ಗೌಡ
ಅದೇ ರೀತಿ ಕಳೆದ ವರ್ಷ ರಿಲೀಸ್ ಆಗಿದ್ದ "ಪ್ರೀತಿಯ ರಾಯಭಾರಿ " ಚಿತ್ರದ ನಾಯಕ ನಕುಲ್‌ಗೌಡ ಕೂಡ ಈಗ ಬಡವರ ನೆರವಿಗೆ ನಿಂತಿದ್ದಾರೆ. ಹಸಿದವರ ತುತ್ತಿನ ಚೀಲ ತುಂಬಿಸೋ ಕೆಲಸ ಮಾಡಿದ್ದಾರೆ. ನಕುಲ್‌ಗೌಡ ರಾಜಾಜಿನಗರದ 6ನೇ ಬ್ಲಾಕ್ನಲ್ಲಿ ಸುಮಾರು 300ಕ್ಕೂ ಅಧಿಕ ಬಡ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ತರಕಾರಿಗಳನ್ನು ವಿತರಣೆ ಮಾಡುವ ಮೂಲಕ ಬಡವರ ನೆರವಿಗೆ ನಿಂತಿದ್ದಾರೆ. ನಕುಲ್‌ಗೌಡರ ಕೆಲಸಕ್ಕೆ ನಿರ್ಮಾಪಕ ಭಾ ಮ ಹರೀಶ್ ಸಾಥ್ ನೀಡಿದ್ದಾರೆ.