'ಪ್ರೀತಿಯ ರಾಯಭಾರಿ' ಚಿತ್ರದ ನಟ ನಕುಲ್ ಗೌಡ ಈಗ 'ಹಳೆ ಡವ್ ನೆನಪಲ್ಲಿ' ಎಂಬ ಚಿತ್ರದ ಮೂಲಕ ಮತ್ತೆ ಗಾಂಧಿನಗರದತ್ತ ಮುಖ ಮಾಡಿದ್ದಾರೆ. ಸೋಮವಾರ ಈ ಚಿತ್ರದ ಮುಹೂರ್ತ ನೆರವೇರಿಸಿರುವ ಚಿತ್ರತಂಡ ಟೀಸರ್ ಕೂಡ ರಿಲೀಸ್ ಮಾಡಿದೆ.
'ಪ್ರೀತಿಯ ರಾಯಭಾರಿ' ಚಿತ್ರದ ಮೂಲಕ ನಾಯಕನಾಗಿದ್ದ ನಕುಲ್ ಒಂದು ವರ್ಷ ಬಿಡುವು ಪಡೆದಿದ್ದರು. ಈ ಟೈಮ್ನಲ್ಲಿ ನಟನೆ ಬಗ್ಗೆ ತೆರಬೇತಿ ಪಡೆದು ಈಗ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ನವ ನಿರ್ದೇಶಕ ಮಾರುತಿ ಕಥೆ-ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದು, ಸ್ಯಾಂಡಲ್ವುಡ್ನಲ್ಲಿ ಮೋಡಿ ಎನ್ನುವ ದೃಢ ನಂಬಿಕೆಯಲ್ಲಿದ್ದಾರೆ.
ಹಳೆ ಡವ್ ನೆನಪಲ್ಲಿ ಚಿತ್ರದ ಮುಹೂರ್ತ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅವರ ಹೆಸರುಗಳನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಮೋಸ ಮಾಡಿದ ಹುಡುಗಿಯರ ನೆನಪಿನಲ್ಲಿ ನಾಯಕ ಇರ್ತಾನೆ. ಈ ಸಂಕೋಲೆಗಳಿಂದ ಆತ ಹೇಗೆ ಹೊರ ಬರುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ. ಈ ಚಿತ್ರದಲ್ಲಿ ಮೂರು ಲವ್ ಸ್ಟೋರಿ ತೋರಿಸಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ. ಆಗಸ್ಟ್ಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚಿತ್ರವನ್ನು ನಾಯಕ ನಕುಲ್ ಗೌಡ ಸ್ನೇಹಿತ ಗಿರಿಧರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಸ್ಟೋರಿಯು ಅದ್ಭುತವಾಗಿದ್ದು, ನಕುಲ್ ನನ್ನ ಸ್ನೇಹಿತ. ಹಾಗಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿರುವುದಾಗಿ ಗಿರಿಧರ್ ಹೇಳಿದ್ದಾರೆ.
ಇನ್ನು ನಿನ್ನೆ ನಗರದ ಎಸ್.ಅರ್.ವಿ ಥಿಯೇಟರ್ಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಶರವಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡರು ಹಾಗೂ ಕಾರ್ಯದರ್ಶಿಗಳಾದ ಭಾಮಾ ಹರೀಶ್ ಆಗಮಿಸಿ ಚಿತ್ರದ ಟೀಸರನ್ನು ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.