ಜೀ ಕನ್ನಡಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಈ ಶೋನಲ್ಲಿ ನಟಿಸಿದವರಲ್ಲಿ ಬಹುಪಾಲು ಕಲಾವಿದರು ಬಿಗ್ ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಅದ್ರಲ್ಲು ಕಾಮಿಡಿ ಕಿಲಾಡಿಗಳು ಸೀಸನ್ ಒಂದರಲ್ಲಿ ಇದ್ದ ಬಹುಪಾಲು ಕಲಾವಿದರು ದೊಡ್ಡ ದೊಡ್ಡ ಸಿನಿಮಾಗಳಲ್ಲಿಯೇ ನಟಿಸಿದ್ದಾರೆ.
ಆದ್ರೆ ಒಂದನೇ ಸೀಸನ್ನಲ್ಲಿದ್ದ ಕಲಾವಿದ ಮಂಡ್ಯದ ಮುತ್ತುರಾಜ್ಗೆ ಸಿನಿಮಾಗಳಲ್ಲಿ ಚಾನ್ಸ್ಗಳೇ ಸಿಗಲಿಲ್ಲ. ಇದ್ರಿಂದ ಸಿನಿಮಾ ರಂಗದಲ್ಲಿ ಮುಂದೆ ಬರಬೇಕಂದ್ರೆ ಯಾವ ಟ್ಯಾಲೆಂಟ್ ಇರಬೇಕು ಅಂತ ಮುತ್ತು ಹೇಳಿದ್ದಾರೆ.
ಕನ್ನಡದ 'ಆನೆಬಲ' ಸಿನಿಮಾದಲ್ಲಿ ಮುತ್ತುರಾಜ್ ನಟಿಸಿದ್ದಾರೆ. ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಚಿತ್ರರಂಗದ ಬಗ್ಗೆ ಇದ್ದ ತಮ್ಮ ನೋವನ್ನು ವ್ಯಕ್ತಪಡಿಸಿದ್ರು. ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಯಾಗಬೇಕಂದ್ರೆ ಮಾರ್ಕೆಟಿಂಗ್ ಗೊತ್ತಿರಬೇಕು. ನಮಗೆ ಟ್ಯಾಲೆಂಟ್ ಇಲ್ಲದಿದ್ರು ಪರವಾಗಿಲ್ಲ ಪ್ರಮೋಟಿಂಗ್ ಮಾಡಿಕೊಳ್ಳೋ ಕೆಲಸಗಳು ಗೊತ್ತಿರಬೇಕು. ಆದ್ರೆ ಆ ಕೆಲಸಗಳು ನಮಗೆ ಗೊತ್ತಿಲ್ಲ. ನಾನು ಈಗ ಅದನ್ನು ಸಾತ್ವಿಕವಾಗಿ ಕಲಿಯುತ್ತಿದ್ದೇನೆ ಎಂದು ಮುತ್ತುರಾಜ್ ನಗುನಗುತ್ತಲೇ ಬೆಸರ ವ್ಯಕ್ತಪಡಿಸಿದರು.
ಸಿನಿಮಾದಲ್ಲಿ ಚಾನ್ಸ್ ಸಿಗಬೇಕಂದ್ರೆ ಈ ಕೆಲಸ ಮಾಡಬೇಕು ಎಂದ ಕಾಮಿಡಿ ಕಿಲಾಡಿ ಕಲಾವಿದ ಸದ್ಯ ಮುತ್ತರಾಜ್ ಎರಡ್ಮೂರು ಚಿತ್ರಗಳಲ್ಲಿ ನಟಿಸ್ತಿದ್ದಾರಂತೆ. ವಸಿಷ್ಠ ಸಿಂಹ ಹಾಗೂ ಲೂಸ್ ಮಾದ ಯೋಗಿ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದೀನಿ. ಅಲ್ಲದೆ ಒಂದಿಬ್ಬರು ನನ್ನನ್ನು ನಾಯಕನಾಗಿ ಮಾಡುವ ಸಲುವಾಗಿ ಸ್ಕ್ರಿಪ್ಟ್ ಮಾಡ್ತಿದ್ದಾರೆ. ಆದರೆ ನನಗೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಬೇಕು ಎಂಬ ಆಸೆ ಇಲ್ಲ. ನಾನು ಇಂಟರ್ನ್ಯಾಶನಲ್ ಸರ್ಟಿಫೈಡ್ ಯೋಗ ಮಾಸ್ಟರ್ ಎಂದರು.